ಮಹಾರಾಷ್ಟ್ರ: ಹಳಿತಪ್ಪಿದ ಗೂಡ್ಸ್ ರೈಲಿನ ಬೋಗಿಗಳು
ಒಂದೇ ದಿನದಲ್ಲಿ 3 ರೈಲ್ವೆ ಅವಘಡ

ಖಂಡಾಲಾ, ಸೆ.7: ಮಹಾರಾಷ್ಟ್ರದ ಖಂಡಾಲಾ ಸಮೀಪ ಗೂಡ್ಸ್ ರೈಲಿನ ಬೋಗಿಗಳು ಹಳಿತಪ್ಪಿದ ಘಟನೆ ನಡೆದಿದ್ದು, ಇಂದು ನಡೆದ 3ನೆ ರೈಲ್ವೆ ಅವಘಡ ಇದಾಗಿದೆ ಎಂದು ಕೇಂದ್ರ ರೈಲ್ವೆ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.
ಇಂದು ಬೆಳಗ್ಗೆ ಸಂಭವಿಸಿದ ಎರಡು ರೈಲ್ವೆ ಅವಘಡಗಳ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿರುವ ನಡುವೆಯೇ ರೈಲಿನ ಎರಡು ಬೋಗಿಗಳು ಹಳಿತಪ್ಪಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
“ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ನಾವು ಹಳಿಯ ದುರಸ್ತಿ ಕಾರ್ಯ ಮಾಡುತ್ತಿದ್ದೇವೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಗುರುವಾರ ಸಂಭವಿಸಿದ 3ನೆ ರೈಲ್ವೆ ಅವಘಡ ಇದಾಗಿದೆ.
Next Story





