ಸೆ.9ಕ್ಕೆ ಪೋನ್ ಇನ್ ಕಾರ್ಯಕ್ರಮ
ಉಡುಪಿ, ಸೆ.7: ಜಿಲ್ಲೆಯ ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಅರಿತುಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ್ ಹಮ್ಮಿಕೊಂಡಿರುವ ಈ ವಾರದ ಫೋನ್ ಇನ್ ಸೆ.9ರಂದು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಎಸ್ಪಿ ಅವರು ಜಿಲ್ಲೆಯ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಸಾಧಿಸಿ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಜಿಲ್ಲೆಯ ಸಾರ್ವಜನಿಕರು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ನೀವು ವಾಸಿಸುವ ಪ್ರದೇಶ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳೇನಾದರೂ ನಡೆಯುತ್ತಿದ್ದಲ್ಲಿ, ಅದನ್ನು ತಡೆಗಟ್ಟಲು ಮಾಹಿತಿ ಅಥವಾ ಪೊಲೀಸರಿಂದ ಏನಾದರೂ ತಪ್ಪಾಗುತ್ತಿದ್ದಲ್ಲಿ ಮಾಹಿತಿ, ಹಿಂದಿನ ಅರ್ಜಿ/ಪ್ರಕರಣಗಳ ಕುರಿತಾಗಿ ಮಾಹಿತಿ ಅಥವಾ ಉಡುಪಿ ಜಿಲ್ಲಾ ಪೊಲೀಸರು ಜನಸ್ನೇಹಿ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಏನಾದರೂ ಸಲಹೆಗಳನ್ನು ನೀಡಬಹುದಾಗಿದೆ.
ನೇರ ಫೋನ್-ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿದವರ ವಿವರವನ್ನು ಗುಪ್ತವಾಗಿ ಇಡಲಾಗುವುದು. ನೇರ ಫೋನ್ ಇನ್ ಕಾರ್ಯಕ್ರಮ ನಡೆಯುವ ಅವಧಿ ಸೆ.9 ಬೆಳಗ್ಗೆ 10 ರಿಂದ 11 ರವರೆಗೆ. ಸಂಪರ್ಕಿಸಬೇಕಾದ ಸ್ಥಿರ ದೂರವಾಣಿ ಸಂಖ್ಯೆ: 0820-2534777