ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಬಿಜೆಪಿಯ 200 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ಮಂಗಳೂರು, ಸೆ.7: ‘ಮಂಗಳೂರು ಚಲೋ’ ಪ್ರತಿಭಟನಾ ಸಭೆ ಮುಗಿದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಸುಮಾರು 200 ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸು ದಾಖಲಾಗಿದೆ.
ಮುತ್ತಿಗೆ ವೇಳೆ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಕೊಂಡೊಯ್ಯುತ್ತಿದ್ದಾಗ ಕಾರ್ಯಕರ್ತರು ಬಸ್‌ನ ಗಾಜನ್ನು ಗುದ್ದಿ ಪುಡಿ ಮಾಡಿದ್ದರು. ಅಲ್ಲದೆ ಕಾರ್ಯಕರ್ತರನ್ನು ವಶಕ್ಕೆ ತೆಗೆದು ಕರೆದೊಯ್ಯುತ್ತಿದ್ದ ಬಸ್‌ಗಳ ಚಕ್ರದ ಗಾಳಿ ತೆಗೆದು ತೊಂದರೆ ಉಂಟು ಮಾಡಿದ್ದಾರೆ. ಈ ಬಗ್ಗೆ 200 ಮಂದಿ ಕಾರ್ಯಕರ್ತರ ಮೇಲೆ ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
Next Story





