ಸೆ.9ರಂದು ಪಿ.ಎ.ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ
ಕೊಣಾಜೆ, ಸೆ. 7: ಪಿ.ಎ.ಕಾಲೇಜಿನ 2016-2017 ಶೈಕ್ಷಣಿಕ ವರ್ಷದ ಪದವಿ ಪ್ರದಾನ ಸಮಾರಂಭವು ಸೆ.9 ರಂದು ಕಾಲೇಜಿನ ಆವರಣದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಯಾಗಿ ಎಐಸಿಟಿಇ ಪ್ರಾದೇಶಿಕ ಅಧಿಕಾರಿ ಹಾಗೂ ನಿರ್ದೇಶಕ ಡಾ. ಯು ರಮೇಶ್ ಭಾಗವಹಿಸುವರು.
ಗೌರವ ಅತಿಥಿಯಾಗಿ ಕ್ಯಾಲಿಕಟ್ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಡಾ. ಅಬ್ದುಲ್ ಸಲಾಂ, ಶ್ರೀನಿವಾಸ ಎಂ ಜಮಕಂಡಿ, ಇವರು ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಅಧ್ಯಕ್ಷರು ಡಾ. ಪಿ. ಎ. ಇಬ್ರಾಹಿಂ ಹಾಜಿ ವಹಿಸಲಿರುವರು. ಸುಮಾರು 450 ಸ್ನಾತಕೋತರ ಮತ್ತು ಇಂಜಿನಿಯರಿಂಗ್ ಪದವೀಧರರು ಭಾಗವಹಿಸಲಿರುವರೆಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
Next Story





