ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಖಂಡನೆ
ಉಳ್ಳಾಲ, ಸೆ. 7: ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ರನ್ನು ಹತ್ಯೆಗೈದಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉಳ್ಳಾಲ ವಲಯ ಘಟಕವು ತೀವ್ರವಾಗಿ ಖಂಡಿಸಿದೆ.
ಗೌರಿ ಲಂಕೇಶ್‌ರವರು ಕೋಮುವಾದ ಮತ್ತು ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಚಳುವಳಿಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರಲ್ಲದೆ, ದಾರಿತಪ್ಪಿದ ನಕ್ಸಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸಾಹಿತಿಗಳನ್ನು, ವಿಚಾರವಾದಿಗಳನ್ನು ಕೊಲೆ ಮಾಡುವುದರ ಮೂಲಕ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕಾರ್ಯಕ್ಕೆ ಇಳಿದಿರುವ ಇಂತಹ ಭಯೋತ್ಪಾಧಕರನ್ನು ಮಟ್ಟ ಹಾಕಲು ಸರಕಾರ ತೀವ್ರ ಕ್ರಮ ವಹಿಸಬೇಕು. ಅಪರಾಧಿಗಳನ್ನು ಪತ್ತಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಉಳ್ಳಾಲ ವಲಯ ಪ್ರಕರಟನೆಯಲ್ಲಿ ತಿಳಿಸಿದೆ.
Next Story





