ವಲಸಿಗ ರಕ್ಷಣೆ ರದ್ದು: 15 ರಾಜ್ಯಗಳು ನ್ಯಾಯಾಲಯಕ್ಕೆ

ನ್ಯೂಯಾರ್ಕ್, ಸೆ. 7: ಯುವ ವಲಸಿಗರನ್ನು ಗಡಿಪಾರಿನಿಂದ ರಕ್ಷಿಸುವ ಕಾರ್ಯಕ್ರಮವನ್ನು ರದ್ದುಪಡಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಅಮೆರಿಕದ 15 ರಾಜ್ಯಗಳು ಮತ್ತು ಕೊಲಂಬಿಯ ಜಿಲ್ಲೆ ಬುಧವಾರ ನ್ಯಾಯಾಲಯಕ್ಕೆ ಹೋಗಿವೆ.
ನ್ಯೂಯಾರ್ಕ್, ಮ್ಯಾಸಚುಸೆಟ್ಸ್, ವಾಶಿಂಗ್ಟನ್, ಕನೆಕ್ಟಿಕಟ್, ಡೆಲಾವೆರ್, ಕೊಲಂಬಿಯ ಜಿಲ್ಲೆ, ಹವಾಯಿ, ಇಲಿನಾಯಿಸ್, ಅಯೋವ, ನ್ಯೂ ಮೆಕ್ಸಿಕೊ, ನಾರ್ತ್ ಕ್ಯಾರಲೈನ, ಒರೆಗಾನ್, ಪೆನ್ಸಿಲ್ವೇನಿಯ, ರೋಡ್ ಐಲ್ಯಾಂಡ್, ವರ್ಮಂಟ್ ಮತ್ತು ವರ್ಜೀನಿಯಗಳು ನ್ಯೂಯಾರ್ಕ್‌ನ ಈಸ್ಟರ್ನ್ ಡಿಸ್ಟ್ರಿಕ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿವೆ.
Next Story





