ಮಧ್ಯಪ್ರದೇಶ: ಮತ್ತೆ 24 ಶಿಶುಗಳ ಸಾವು

ಭೋಪಾಲ್, ಸೆ.7: ಮಧ್ಯಪ್ರದೇಶದ ವಿಧಿಷ ಜಿಲ್ಲಾಸ್ಪತ್ರೆಯಲ್ಲಿ 24 ನವಜಾತ ಶಿಶುಗಳು ಮೃತಪಟ್ಟ ದುರ್ಘಟನೆ ನಡೆದಿದೆ. ಶಿಶುಗಳ ದುರ್ಮರಣಕ್ಕೆ ಸಂಬಂಧಿಸಿ ಕಳೆದ ಒಂದು ವಾರದಲ್ಲಿ ನಡೆದ ಎರಡನೇ ದುರ್ಘಟನೆ ಇದಾಗಿದೆ. ಆಗಸ್ಟ್‌ನಲ್ಲಿ ಶಹದೊಲ್ ನ ಸರಕಾರಿ ಆಸ್ಪತ್ರೆಯಲ್ಲಿ 36 ನವಜಾತ ಶಿಶುಗಳು ಮೃತಪಟ್ಟಿದ್ದವು.
ಆಗಸ್ಟ್‌ನಲ್ಲಿ ವಿದಿಷ ಜಿಲ್ಲಾಸ್ಪತ್ರೆಯ ‘ವಿಶೇಷ ನವಜಾತ ಶಿಶುಗಳ ಆರೈಕೆ ವಿಭಾಗ’ಕ್ಕೆ 96 ನವಜಾತ ಶಿಶುಗಳನ್ನು ದಾಖಲಿಸಲಾಗಿದ್ದು ಇದರಲ್ಲಿ 24 ಶಿಶುಗಳು ಮೃತಪಟ್ಟಿದ್ದವು. ಈ ಶಿಶುಗಳು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದವು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
Next Story





