ಅನಿಲ ಸೋರಿಕೆ: ದಂಪತಿಗೆ ಗಾಯ

ಗುಂಡ್ಲುಪೇಟೆ, ಸೆ.7: ಮನೆಯಲ್ಲಿ ಅನಿಲ ಸೋರಿಕೆಯಿಂದ ಸಿಲಿಂಡಲಿಗೆ ಬೆಂಕಿಹೊತ್ತಿಕೊಂಡ ಪರಿಣಾಮ ಮನೆಯ ದಂಪತಿಗೆ ಗಾಯವಾಗಿರುವ ಘಟನೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಂಪತ್ತು ಎಂಬುವರ ಮನೆಯ ಅಡುಗೆ ಮನೆಯಲ್ಲಿ ಇಟ್ಟಿದ್ದ ಗ್ಯಾಸ್ ಸಿಲಿಂಡರಿನಲ್ಲಿ ಅನಿಲ ಸೋರಿಕೆಯುಂಟಾಗಿದ್ದು, ಸಂಪತ್ತು ಅವರ ಪತ್ನಿ ಪದ್ಮಾವತಿ ಮುಂಜಾನೆ ಟೀ ಮಾಡಲು ಮುಂದಾದಾಗ ಬೆಂಕಿತಗುಲಿದೆ. ಇದನ್ನು ಆರಿಸಲು ಯತ್ನಿಸುವಾಗ ಸಿಲಿಂಡರ್ ಉರುಳಿಬಿದ್ದಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಮುಂದಾದಾಗ ನೆಲಕ್ಕೆ ಬಿದ್ದ ಸಿಲಿಂಡರ್ ಉರುತ್ತಾ ಬಂದು ಸಿಲಿಂಡರ್ ಮನೆಯ ಹೊರಭಾಗದಲ್ಲಿ ಉರಿದ ಪರಿಣಾಮಾವಾಗಿ ಮನೆಯ ಮೇಲ್ಚಾವಣಿ ಹಾಗೂ ಸಮೀಪದ ಮಾರಿಗುಡಿಯ ಮೇಲ್ಚಾವಣಿಗೇ ಹಾನಿಯಾಗಿದೆ.
ಅಕ್ಕಪಕ್ಕದ ಮನೆಯವರ ನೆರವಿನಿಂದ ಬೆಂಕಿಯನ್ನು ಆರಿಸಲಾಯಿತು. ಘಟನೆಯಲ್ಲಿ ಸಂಪತ್ತು ಹಾಗೂ ಪದ್ಮಾವತಿಯವರ ಕೈಕಾಲುಗಳಿಗೆ ಸುಟ್ಟಗಾಯದಿಂದ ಬೊಬ್ಬೆಗಳುಂಟಾಗಿದ್ದು ಕಬ್ಬಹಳ್ಳಿ ಗ್ರಾಮದ ಸಮುದಾಯ ಆರೋಗ್ಯಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.
ಈ ಬಗ್ಗೆ ಕಬ್ಬಹಳ್ಳಿ ಉಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅನಿಲ ಸರಬರಾಜು ವಿತರಕ ಹಾಗೂ ಉಪಠಾಣೆಯ ಮುಖ್ಯಪೇದೆ ಮಲ್ಲಿಕಾರ್ಜುನ ಭೇಟಿ ನೀಡಿ ಪರಿಶೀಲಿಸಿದರು.





