ಮೂಡಿಗೆರೆ: ರೋಟರಿ ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ

ಮೂಡಿಗೆರೆ, ಸೆ.8: ತಾಲೂಕಿನ ಜನ್ನಾಪುರದ ಚಿನ್ನಿಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಗೋಣಿಬೀಡು ರೋಟರಿ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಸಾಧಕ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ರೋಟರಿ ಅಧ್ಯಕ್ಷ ಕೆ.ಬಿ.ಚಂದ್ರೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಶಾಲೆಯಾದರೂ ಕಲಿಕೆಯ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿರುವ ಶಾಲೆಯಲ್ಲಿ ವ್ಯಾಸಾಂಗ ಮಾಡಿದವರು ಉನ್ನತ ಮಟ್ಟದ ಹುದ್ದೆ ಅಲಂಕರಿಸಿದ್ದಾರೆ. ಈ ದೇಶವನ್ನೇ ಬದಲಾಯಿಸುವಂತಹ ಶಕ್ತಿ ಶಿಕ್ಷಕರಲ್ಲಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ವಿಧ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಶ್ರಮ ವಹಿಸಬೇಕೆಂದು ಮನವಿ ಮಾಡಿದರು.
ರೋಟರಿ ಉಪರಾಜ್ಯಪಾಲ ಸಿ.ಸಿ.ಸವೀನ್, ಕಾರ್ಯದರ್ಶಿ ರೋಷನ್ ಡಿಸೋಜ, ಗೋಣಿಬೀಡು ಗ್ರಾ.ಪಂ.ಸದಸ್ಯ ಸುಧೀರ್, ವರದೇಗೌಡ, ಕಸಾಪ ಹೋಬಳಿ ಅಧ್ಯಕ್ಷ ಸಂದೀಪ್, ಜೆ.ಎಸ್.ರಘು ಶಿಕ್ಷಕ ದಿನಾಚರಣೆಯ ಶುಭಾಷಯವನ್ನು ಕೋರಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ವೀಟ್ಯಾನಾಯಕ್, ಶಿಕ್ಷಕರುಗಳಾದ ಬಾಲಾಜಿ ನಾಯ್ಕ್, ಕೆ.ಪಿ.ಮಲ್ಲಿಕಾ, ಕೆ.ಸುರೇಖ, ಕೆ.ಎಂ.ಪ್ರೇಮ್‍ಕುಮಾರ್, ಹೆಚ್.ಎಂ.ರಮ್ಲಂಬೇಗಂ, ತಿಪ್ಪೇಸ್ವಾಮಿ, ಎಂ.ಎನ್.ಅಶೋಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.







