ಯೇಸು ಮತ್ತು ಮೋದಿಯ ಕನಸುಗಳು ಒಂದೇ ಆಗಿದೆ: ಕೇಂದ್ರ ಸಚಿವ ಅಲ್ಫೋನ್ಸ್

ಹೊಸದಿಲ್ಲಿ,ಆ. 8: ಯೇಸು ಕ್ರಿಸ್ತ ಮತ್ತು ಮೋದಿಯ ಕನಸು ಒಂದೇ ಆಗಿದೆ ಎಂದು ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂದಾನಂ ಹೇಳಿದ್ದಾರೆ. ಎಲ್ಲ ಮಕ್ಕಳು ಶಾಲೆಗೆ ಹೋಗಬೇಕು, ಎಲ್ಲ ಮನೆಗಳಲ್ಲಿ ಶೌಚಾಲಯ ಇರಬೇಕು. ಎಲ್ಲರಿಗೂ ಬ್ಯಾಂಕ್ ಖಾತೆ ಇರಬೇಕು. ಅದರಲ್ಲಿ ಹಣವೂ ಇರಬೇಕು, ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು ಎನ್ನುವುದು- ಇದು ಮೋದಿಯ ಕನಸುಗಳು ಎಂದು ಕಣ್ಣಂದಾನಂ ಹೇಳಿದರು.
ಯೇಸು ಭ್ರಷ್ಟಾಚಾರದ ವಿರುದ್ಧ, ಅಸಮಾನತೆಯ ವಿರುದ್ಧ ಹೋರಾಡಿದ್ದಾರೆ. ಆದ್ದರಿಂದ ಮೋದಿಯ ಕನಸುಗಳು ಯೇಸುಕ್ರಿಸ್ತರ ಕನಸುಗಳೆಂದು ಹೇಳಿದ್ದೇನೆ. ಯೇಸು ಕ್ರಿಸ್ತ ಮತ್ತು ಮೋದಿಯ ಕನಸುಗಳಲ್ಲಿ ಹೆಚ್ಚು ಸಾಮ್ಯತೆದಳಿವೆ ಎಂದು ಸಚಿವರು ಹೇಳಿದರು.
ವಾಣಿಜ್ಯ ಪತ್ರಿಕೆ ಮಿಂಟ್‌ಗೆ ನೀಡಿದ ಸಂದರ್ಶನದಲ್ಲಿ ಕಣ್ಣಂದಾನಂ ಈ ಅಭಿಪ್ರಾಯವನ್ನು ತಿಳಿಸಿದರು
’ಪಿಣರಾಯಿ ವಿಜಯನ್ ಮತ್ತು ನಾನು ವೈಯಕ್ತಿಕವಾಗಿ ಗೆಳೆಯರಾಗಿದ್ದೇವೆ. ಅವರೇ ನನ್ನನ್ನು ರಾಜಕೀಯಕ್ಕೆ ಕರೆತಂದಿದ್ದಾರೆ. ಬುಧವಾರ ಕೇರಳದ ಪ್ರವಾಸೋದ್ಯಮದ ಬಗ್ಗೆ ಚರ್ಚಿಸಿದ್ದೇನೆ" ಎಂದರು.
“ನಮ್ಮ ಪ್ರಧಾನಿ ಬಹಳಷ್ಟು ಕನಸುಗಳನ್ನು ಹೊಂದಿದ್ದಾರೆ. ಆ ಕನಸುಗಳಲ್ಲಿ ಕೆಲವನ್ನಾದರೂ ವಾಸ್ತವಕ್ಕಿಳಿಸುವುದು ನನ್ನ ಕೆಲಸವಾಗಿದೆ. ಆದ್ದರಿಂದ ನಾನು ಆ ದೊಡ್ಡ ಕನಸಿನ ಭಾಗವಾಗಿದ್ದೇನೆ.”
ಕೇಂದ್ರದಲ್ಲಿ ಸಚಿವಸ್ಥಾನ ದೊರಕಿದ್ದು ತಿಳಿದು ವಿವಿಧ ನಾಯಕರು ಕರೆ ಮಾಡಿದ್ದರು. ಅವರೆಲ್ಲರೂ ಸಂತೋಷ ಪಟ್ಟಿದ್ದಾರೆ. ಎಲ್ಲರೂ ಬೆಂಬಲ ಸೂಚಿಸಿದ್ದಾರೆ ಎಂದು ಕಣ್ಣಂದಾನಂ ಸಂದರ್ಶನದಲ್ಲಿ ಹೇಳಿದ್ದಾರೆ.







