ಟೌನ್ ಕೋ ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್.ಎಂ. ಆಯ್ಕೆ

ಚಿಕ್ಕಮಗಳೂರು, ಸೆ.8: ನಗರದ ಟೌನ್ ಕೋ ಆಪರೇಟಿವ್ ಸೊಸೈಟಿ (ಲಿ) ಇದರ ಅಧ್ಯಕ್ಷರಾಗಿ ಶ್ರೀನಿವಾಸ್.ಎಂ. ಮತ್ತು ಉಪಾಧ್ಯಕ್ಷರಾಗಿ ಸಿ.ಜಿ.ಗುರುಸ್ವಾಮಿ ಅವಿರೋಧ ಆಯ್ಕೆ ಮಾಡಲಾಯಿತು.
ಶುಕ್ರವಾರ ನಡೆದ ಕಛೇರಿ ಸಭಾಂಗಣದಲ್ಲಿ ಪದಾಧಿಕಾರಿಗಳ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದ್ದು ಚುನಾವಣೆಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಧೀಕ್ಷಕ ಹರೀಶ್‍ಕುಮಾರ್ ನಡೆಸಿಕೊಟ್ಟರು.
ಈ ವೇಳೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಡಾ.ಡಿ.ಎಲ್.ವಿಜಯ್‍ಕುಮಾರ್, ನಗರಸಭೆ ಸದಸ್ಯ ಪುಟ್ಟಸ್ವಾಮಿ, ಹಿರೇಮಗಳೂರು ರಾಮಚಂದ್ರ ಸೇರಿದಂತೆ ಮತ್ತಿತರರು ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಬಿ.ಎನ್.ರಾಜಣ್ಣಶೆಟ್ಟಿ, ಸಿ.ಎಸ್. ಕೇಶವಮೂರ್ತಿ, ಬಿ.ಎಂ.ಕುಮಾರ್, ಸಿ.ಆರ್.ಕೇಶವಮೂರ್ತಿ, ಎಂ.ಎಸ್.ಗಿರಿಧರ್‍ಯತೀಶ್, ವರಸಿದ್ದಿ ವೇಣು ಗೋಪಾಲ್, ಡಿ.ಜಯಂತಿ, ಅಂಬಿಕಾ, ಎ.ಆರ್.ಷರೀಫ್ ಸಭೆಯಲ್ಲಿದ್ದರು. ಸೊಸೈಟಿಯ ಕಾರ್ಯದರ್ಶಿ ಆಲೇಶ್ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿದರು.
Next Story





