ವರದಿಗಾರನ ಬಂಧನ: ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಖಂಡನೆ
ಮಂಗಳೂರು, ಸೆ.8: ‘ವಾರ್ತಾಭಾರತಿ’ಯ ಬಂಟ್ವಾಳ ವರದಿಗಾರ ಇಮ್ತಿಯಾಝ್ ತುಂಬೆ ಅವರನ್ನು ಬಂಟ್ವಾಳ ಪೊಲೀಸರು ಬಂಧಿಸಿರುವ ಕ್ರಮವನ್ನು ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಖಂಡಿಸಿದೆ.
ಪತ್ರಕರ್ತರು ಸಮಾಜದ ಕಣ್ಣಿದ್ದಂತೆ. ಸಮಾಜದ ಆಗುಹೋಗುಗಳನ್ನು ನಿಷ್ಪಕ್ಷಪಾತವಾಗಿ ವರದಿ ಮಾಡುವುದು ಪತ್ರಕರ್ತರ ವೃತ್ತಿ ಧರ್ಮವಾಗಿದೆ. ಕೊಲೆ ಪ್ರಕರಣದ ಆರೋಪಿಯ ಮನೆಗೆ ಪೊಲೀಸರು ದಾಳಿ ಮಾಡಿದ್ದನ್ನೇ ಅಪರಾಧ ಎಂದು ಪರಿಗಣಿಸಿ ಪತ್ರಕರ್ತ ಮತ್ತು ಪತ್ರಿಕಾ ಸಂಸ್ಥೆಯ ಮೇಲೆ ಕಾನೂನು ಕ್ರಮ ಜರಗಿಸುವುದನ್ನು ಸಹಿಸಲು ಅಸಾಧ್ಯ. ಪೊಲೀಸರು ವಸ್ತುಸ್ಥಿತಿ ಅರಿತುಕೊಂಡು ಕ್ರಮ ಜರಗಿಸಬೇಕೇ ವಿನ: ಪತ್ರಕರ್ತರ ಕರ್ತವ್ಯಕ್ಕೆ ಚ್ಯುತಿ ಬರುವಂತೆ ಮಾಡಿರುವುದು ಖಂಡನೀಯ ಎಂದು ಘಟಕದ ಅಧ್ಯಕ್ಷ ಎನ್.ಎಸ್.ಕರೀಂ ತಿಳಿಸಿದ್ದಾರೆ.
Next Story





