ಮೇರಿಮಾತೆ ಕ್ರೈಸ್ತರ ಪಾಲಿಗೆ ನಿಷ್ಕಳಂಕತೆಯ ಆದರ್ಶಧಾತೆ: ಆಲ್ಬರ್ಟ್ ಡಿಸಿಲ್ವ

ಬಣಕಲ್, ಸೆ.8: ಕ್ರೈಸ್ತರು ಮೇರಿಮಾತೆಯನ್ನು ಬರೀ ಯೇಸುವಿನ ತಾಯಿಯಾಗಿ ಗೌರವ ನೀಡದೇ ತಮಗೂ ಅವರು ಮಾತಾ ಸ್ವರೂಪಿಯಾಗಿದ್ದಾರೆ. ಮೇರಿಮಾತೆ ಕ್ರೈಸ್ತರ ಹೆಮ್ಮೆಯ ತಾಯಿಯಾಗಿದ್ದು, ಅವರ ಆದರ್ಶಗಳನ್ನು ಕ್ರೈಸ್ತರು ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಪ್ರೀತಿ ತೋರಿಸಬೇಕು ಎಂದು ಬಣಕಲ್ ಭಾಲಿಕ ಮಾರಿಯ ಚರ್ಚ್ ಧರ್ಮಗುರು ಪಾದರ್ ಆಲ್ಬರ್ಟ್ ಡಿಸಿಲ್ವ ಹೇಳಿದರು.
ಅವರು ಶುಕ್ರವಾರ ಮೇರಿ ಮಾತೆಯ ಜನ್ಮದಿನವನ್ನು ಕೊಟ್ಟಿಗೆಹಾರದ ಸೆಕ್ರೆಡ್ ಹಾರ್ಟ್ ಚರ್ಚ್ ಮತ್ತು ಬಣಕಲ್ ಭಾಲಿಕ ಮರಿಯ ಚರ್ಚ್‍ನಲ್ಲಿ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.
ಐಕ್ಯತೆ ಮತ್ತು ಪ್ರೀತಿ ಪ್ರತಿಯೊಬ್ಬರ ಕುಟುಂಬದಲ್ಲಿ ನೆಲೆಯೂರಬೇಕು. ಯೇಸುವಿನ ತಾಯಿ ಮರಿಯಮ್ಮನವರ ತ್ಯಾಗ ನಮಗೆಲ್ಲಾ ಮಾರ್ಗದರ್ಶನವಾಗಿದೆ. ಮರಿಯಮ್ಮನವರ ಆದರ್ಶ ಗುಣಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಇತರ ಧರ್ಮಿಯರೊಂದಿಗೂ ಸೌಜನ್ಯತೆ, ಐಕ್ಯತೆ ಮತ್ತು ಪ್ರೀತಿಯಲ್ಲಿ ಬದುಕಿ ನಿಜವಾದ ಕ್ರಿಸ್ತರ ಪ್ರೀತಿಯನ್ನು ನಾವು ನಮ್ಮ ನಡವಳಿಕೆ ಮೂಲಕ ತೋರಿಸಿಕೊಡಬೇಕು ಎಂದರು.
ಧರ್ಮಗುರು ಪಾದರ್ ಅಲ್ಬರ್ಟ್ ಡಿಸಿಲ್ವರವರು ಹೊಸಕ್ಕಿ ತೆನೆಯನ್ನು ಆಶೀರ್ವದಿಸಿ ಪವಿತ್ರತೆಗೊಳಿಸಿದರು. ನಂತರ ಭಕ್ತರು ತಂದ ಹೂಗಳನ್ನು ಭಾಲಿಕಾ ಮರಿಯ ಪ್ರತಿಮೆಗೆ ಅರ್ಪಿಸಿ ಹಬ್ಬದ ಸಂಭ್ರಮ ಮೆರೆದರು. ಕಬ್ಬು, ಸಿಹಿಯನ್ನು ಚರ್ಚ್‍ನಲ್ಲಿ ನೆರೆದಚ ಭಕ್ತರಿಗೆ ನೀಡಲಾಯಿತು. ಹೊಸಕ್ಕಿಯನ್ನು ನೆರೆದ ಎಲ್ಲಾ ಭಕ್ತರಿಗೂ ಪಾಯಸದ ಮೂಲಕ ಹಂಚಲಾಯಿತು.
ಈ ಸಂದರ್ಭದಲ್ಲಿ ಕೊಟ್ಟಿಗೆಹಾರದ ಚರ್ಚ್‍ನ ಅಧ್ಯಕ್ಷ ಸಿಲ್ವೆಸ್ಟರ್ ಪಿರೇರಾ, ಜೆಸ್ಸಿಂತಾ ಡಿಸೋಜ, ವಿನ್ಸೆಂಟ್‍ಲೋಬೊ, ಅನಿಲ್‍ಮೊಂತೆರೊ, ಮೇರಿಸರೋಜ, ವಿನಿತ್‍ಲೋಬೊ, ಐರಿನ್‍ಲೋಬೊ, ವಿಶ್ವಾಸ್‍ಲೋಬೊ, ವಿನ್ಸೆಂಟ್‍ಡಿಸೋಜ, ಪ್ರೆಡ್ರಿಕ್‍ಡಿಸೋಜ, ಸ್ಟ್ಯಾನಿ ಡಿಸೋಜ, ಬಿನುವರ್ಗೀಸ್, ಲಿಯೋ ಪೆರ್ನಾಂಡಿಸ್, ರಿಚರ್ಡ್‍ಡಿಸೋಜ, ಆಲ್ಬರ್ಟ್‍ಡಿಸೋಜ, ದಿಲಿಪ್‍ಪಿಂಟೊ, ಪ್ರಮೀಳ, ಡೆನಿಸ್‍ಡಿಸೋಜ, ಅರುಣ್, ತೆರೆಸ್ಸಿಯಾ, ಜಾನ್ಸನ್‍ಲೋಬೊ, ಉಲ್ಲಾಸ್‍ಪಿಂಟೊ, ಮಾರ್ಕ್‍ಮೊಂತೆರೊ ಮತ್ತಿತರರಿದ್ದರು.
ಕೆಳಗೂರು ಚರ್ಚ್‍ನಲ್ಲಿ ಹಬ್ಬ ಆಚರಣೆ
ಬಾಳೂರು, ಜಾವಳಿ, ಕೆಳಗೂರು ಚರ್ಚ್‍ನಲ್ಲೂ ಮೇರಿ ಮಾತೆಯ ಜನ್ಮದಿನ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕೆಳಗೂರು ಚರ್ಚ್‍ನಲ್ಲಿ ಹಿರೇಬೈಲ್ ಧರ್ಮಗುರು ಪಾದರ್ ಜಾರ್ಜ್ ಅಂದ್ರಾದೆ ಮಾತನಾಡಿ, ಕ್ರಿಸ್ತರ ತಾಯಿಯಾದ ಮೇರಿ ಮಾತೆ ಆದರ್ಶ ಮಹಿಳೆಯರಲ್ಲಿ ಒಬ್ಬರಾಗಿದ್ದು ಯೇಸುವಿಗೆ ಜನ್ಮ ನೀಡಿ ನಿಷ್ಕಳಂಕ ಮಾತೆಯಾಗಿ ಕ್ರೈಸ್ತರ ಪ್ರೀತಿದಾಯಕ ಮಾತೆಯಾಗಿ ಹೊರಹೊಮ್ಮಿದ್ದಾರೆ. ಅವರ ಆದರ್ಶತೆ ಸರ್ವರಿಗೂ ದಾರಿ ದೀಪವಾಗಲಿ ಎಂದರು.ಪೂಜಾವಿದಿಯಲ್ಲಿ ಕೆಳಗೂರು ತೋಟದ ವ್ಯವಸ್ಥಾಪಕ ಸತುರ್ನಿನ್ ಡಿಸೋಜ, ಉಪ ವ್ಯವಸ್ಥಾಪಕ ವಲೇರಿಯನ್ ಪಿರೇರಾ, ಕಿಟ್ಟಿ ಗೊನ್ಸಾಲ್ವಿಸ್, ಲಾರೆನ್ಸ್ ಡಿಸೋಜ, ಜಾನ್‍ನೊರೋನ್ನಾ, ನೋಯೆಲ್ ಗೊನ್ಸಾಲ್ವಿಸ್, ಅನಿಲ್ ಕುಮಾರ್, ರೋಹನ್ ಉಪಸ್ಥಿತರಿದ್ದರು.







