ಜಿಲ್ಲೆಯ ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಸಹಕರಿಸಿ: ಲತಾ ರವಿಕುಮಾರ್

ತುಮಕೂರು, ಸೆ.8: ಜಿಲ್ಲೆಯ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸಲು ವಿವಿಧ ಸಂಘ ಸಂಸ್ಥೆಗಳು, ಇಲಾಖೆಗಳು ಸಹಕರಿಸಬೇಕೆಂದು ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್ ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರೆಡ್‍ಕ್ರಾಸ್ ಸಂಸ್ಥೆ ಹಾಗೂ ಜನಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ಜರವಾರ ಜರಗಿದ “ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ” ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡುತಿದ್ದ ಅವರು, ಪ್ರಸ್ತುತ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಶೇ.75.14ರಷ್ಟಿದ್ದು,ಇದನ್ನು ಶೇ.80ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.ಈ ನಿಟ್ಟಿನಲ್ಲಿ ಸಾಕ್ಷರತಾ ಪ್ರೇರಕರು ಶ್ರಮಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಮ, ರೆಡ್‍ಕ್ರಾಸ್ ಸಂಸ್ಥೆ ಸಾಕ್ಷರತಾ ವಿಭಾಗದ ಮುಖ್ಯಸ್ಥೆ ಸುಭಾಷಿಣಿ, ಸಂಸ್ಥೆಯ ನಿರ್ದೇಶಕ ಮುಸ್ತಾಕ್ ಅಹ್ಮದ್, ಸಮಾಜ ಸೇವಕ ಎಂ.ರಾಜರಾವ್ ಥಾವರೆ, ಜನಶಿಕ್ಷಣ ಸಂಸ್ಥೆಯ ನಿರ್ದೇಶಕಿ ಸುಕನ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಮಂಜುನಾಥ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಕೆ. ಬಾಲಾಜಿ, ಎಂ.ಹೆಚ್. ಚಂದ್ರಯ್ಯ,ಕಾರ್ಯಕ್ರಮ ಸಹಾಯಕ ಸಿದ್ದರಾಮಯ್ಯ,ದ್ರೇಹಚಾರ್, ಸರಕಾರೇತರ ಸಂಯೋಜಕ ನಾಗರಾಜು ಜಿ.ಬಿ., ರಾಜಣ್ಣ ಜಿ. ಹಾಗೂ ಪ್ರೇರಕರು ಹಾಜರಿದ್ದರು.







