ಕಝಕ್‌ನಲ್ಲಿ ಹೊಡೆದಾಟ: 61 ಭಾರತೀಯ ಕಾರ್ಮಿಕರು ವಾಪಸ್

ಅಸ್ತಾನ (ಕಝಕ್‌ಸ್ತಾನ) ಸೆ. 8: ಕಝಕ್‌ಸ್ತಾನ್‌ನದ ರಾಜಧಾನಿ ಅಸ್ತಾನದ ಕಟ್ಟಡ ನಿರ್ಮಾಣ ಸ್ಥಳವೊಂದರಲ್ಲಿ ಸಾಮೂಹಿಕ ಹೊಡೆದಾಟ ನಡೆಸಿದ 61 ಭಾರತೀಯ ಕಾರ್ಮಿಕರನ್ನು ಅಲ್ಲಿನ ಅಧಿಕಾರಿಗಳು ವಾಪಸ್ ಕಳುಹಿಸಿದ್ದಾರೆ.
ಅಶಿಸ್ತಿಗಾಗಿ ಭಾರತೀಯ ಕಾರ್ಮಿಕರನ್ನು ವಾಪಸ್ ಕಳುಹಿಸಲಾಗುತ್ತಿದೆ ಹಾಗೂ 23 ಕಾರ್ಮಿಕರನ್ನೊಳಗೊಂಡ ಮೊದಲ ಗುಂಪು ಸೆಪ್ಟಂಬರ್ 9ರಂದು ಕಝಕ್‌ಸ್ತಾನದಿಂದ ಹೊರಡಲಿದೆ ಎಂದು ಅಸ್ತಾನ ಮೇಯರ್ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.
ಅಬುಧಾಬಿ ಪ್ಲಾಝಾ ಗಗನಚುಂಬಿ ಕಟ್ಟಡ ಯೋಜನೆಯ ನಿರ್ಮಾಣ ಸ್ಥಳದಲ್ಲಿ ಒಂದು ವಾರದ ಹಿಂದೆ ಭಾರತೀಯ ಕಾರ್ಮಿಕರು ಮತ್ತು ಕಝಕ್ ಕಾರ್ಮಿಕರ ನಡುವೆ ಹೊಡೆದಾಟ ನಡೆದಿತ್ತು.
Next Story





