ಮುಂದುವರಿದ ‘ಇರ್ಮಾ’ ದಾಂಧಲೆ: 14 ಸಾವು

ಟರ್ಕ್ಸ್ ಆ್ಯಂಡ್ ಕೈಕೊಸ್, ಸೆ. 8: ‘ಇರ್ಮಾ’ ಚಂಡಮಾರುತ ಗುರುವಾರ ಕೆರಿಬಿಯನ್‌ನಲ್ಲಿ ಟರ್ಕ್ಸ್ ಆ್ಯಂಡ್ ಕೈಕೊಸ್ ದ್ವೀಪಕ್ಕೆ ಅಪ್ಪಳಿಸಿದ್ದು ಕಟ್ಟಡಗಳನ್ನು ನಡುಗಿಸಿದೆ.
ಶತಮಾನದ ಅತ್ಯಂತ ಶಕ್ತಿಶಾಲಿ ಅಟ್ಲಾಂಟಿಕ್ ಬಿರುಗಾಳಿಯಿಂದಾಗಿ ಈ ವಲಯದಲ್ಲಿ ಈಗಾಗಲೇ 14 ಮಂದಿ ಮೃತಪಟ್ಟಿದ್ದಾರೆ. ಅದು ಈಗ ಫ್ಲೋರಿಡದತ್ತ ಧಾವಿಸುತ್ತಿದೆ.
ಗಂಟೆಗೆ 290 ಕಿ.ಮೀ. ವೇಗದ ಗಾಳಿಯನ್ನೊಳಗೊಂಡ ಫ್ರಾನ್ಸ್ ಗಾತ್ರದ ಚಂಡಮಾರುತ ಇತ್ತೀಚಿನ ದಿಗಳಲ್ಲಿ ಈಶಾನ್ಯ ಕೆರಿಬಿಯನ್‌ನ ಹಲವಾರು ಸಣ್ಣ ದ್ವೀಪಗಳನ್ನು ಪುಡಿಗಟ್ಟಿದೆ. ಈ ಭೀಕರ ಬಿರುಗಾಳಿಯ ಆಟಾಟೋಪಕ್ಕೆ ಬಾರ್ಬುಡ, ಸೇಂಟ್ ಮಾರ್ಟಿನ್, ಬ್ರಿಟಿಶ್ ವರ್ಜಿನ್ ಐಲ್ಯಾಂಡ್ಸ್ ಮತ್ತು ಯುಎಸ್ ವರ್ಜಿನ್ ಐಲ್ಯಾಂಡ್ಸ್ ದ್ವೀಪಗಳು ನಲುಗಿವೆ.
Next Story





