ಕೆಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಸೆ.8: ರಾಜ್ಯ ಸರಕಾರವು 8 ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಇಬ್ಬರು ಅಧಿಕಾರಿಗಳನ್ನು ಹಾಲಿ ಹುದ್ದೆಯೊಂದಿಗೆ ಹೆಚ್ಚುವರಿ ಹೊಣೆಗಾರಿಕೆ ವಹಿಸಿ ಶುಕ್ರವಾರ ಆದೇಶ ಹೊರಡಿಸಿದೆ.
ಎಸ್.ರಮ್ಯಾ-ಕಂದಾಯ ಇಲಾಖೆಯ ಭೂಮಿ ಉಸ್ತುವಾರಿ ಕೋಶದ ಭೂ ದಾಖಲೆಗಳ ಆಧುನೀಕರಣ ವಿಭಾಗದ ವಿಶೇಷ ಜಿಲ್ಲಾಧಿಕಾರಿ, ಡಾ.ಎಂ.ಮಹೇಶ್- ಸಾರಿಗೆ ಸಚಿವರ ಆಪ್ತ ಕಾರ್ಯದರ್ಶಿ, ಕೆ.ಎಂ.ಸುರೇಶ್ ಕುಮಾರ್-ಕೆಐಎಡಿಬಿ ಸಹಾಯಕ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಎಲ್.ಸಿ.ನಾಗರಾಜು-ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ(ಯೋಜನೆ), ಎಲಿಷಾ ಆಂಡ್ರೂಸ್-ಕೆಯುಐಡಿಎಫ್‌ಸಿ ಉಪ ಪ್ರಧಾನ ವ್ಯವಸ್ಥಾಪಕರು, ಜೆ.ಎನ್.ಶ್ವೇತಾ-ಕೆಯುಐಡಿಎಫ್‌ಸಿ ಉಪ ಪ್ರಧಾನ ವ್ಯವಸ್ಥಾಪಕರು, ಆರ್.ರಂಗಸ್ವಾಮಿ-ಬೆಂಗಳೂರಿನ ನೆಫ್ರೊ ಯುರಾಲಜಿ ಸಂಸ್ಥೆಯ ಆಡಳಿತಾಧಿಕಾರಿ ಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಪ್ರಭಾರ: ಬೆಂಗಳೂರಿನ ಖಜಾನೆ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಸಿ.ಎನ್.ಮೀನಾ ನಾಗರಾಜ್‌ರನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಯ ಜೊತೆಗೆ ಮುಂದಿನ ಆದೇಶದವರೆಗೆ ಅಟಲ್‌ಜೀ ಜನಸ್ನೇಹಿ ಕೇಂದ್ರದ ಅಪರ ನಿರ್ದೇಶಕರ ಹುದ್ದೆಗೆ ಸಮವರ್ತಿ ಪ್ರಭಾರದಲ್ಲಿ ನೇಮಿಸಲಾಗಿದೆ.
ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಜೆ.ಜಗದೀಶ್‌ರನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಯ ಜೊತೆಗೆ ಮುಂದಿನ ಆದೇಶದವರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ ಸಮವರ್ತಿ ಪ್ರಭಾರದಲ್ಲಿರಿಸಿ ನೇಮಿಸಲಾಗಿದೆ.







