ಕಾಸರಗೋಡು: ನದಿಗೆ ಹಾರಿ ಪುತ್ರಿ ಜತೆ ತಾಯಿ ಆತ್ಮಹತ್ಯೆ
ಕಾಸರಗೋಡು, ಸೆ.9: ಪುತ್ರಿ ಜತೆ ತಾಯಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಸರಗೋಡು ಸಮೀಪದ ಮೊಗ್ರಾಲ್ ನಲ್ಲಿ ಶನಿವಾರ ನಡೆದಿದೆ.
ಚೌಕಿ ಕಂಬಾರಿನ ಅಬ್ದುಲ್ಲಾರವರ ಪತ್ನಿ ಮರಿಯುಮ್ಮ ( 45) ಮತ್ತು ಅವರ ಆರು ವರ್ಷದ ಪುತ್ರಿ ಮುರ್ಶಿದಾ ಆತ್ಮಹತ್ಯೆ ಮಾಡಿಕೊಂಡವ ರೆಂದು ಗುರುತಿಸಲಾಗಿದೆ.
ಮರಿಯಮ್ಮ ಅವರು ತನ್ನ ಮಗಳೊಂದಿಗೆ ತೋಟಕ್ಕೆಂದು ತೆರಳಿದ್ದು, ಬಳಿಕ ಮನೆಗೆ ವಾಪಸಾಗದಿದ್ದ ವೇಳೆ ಅಲ್ಲಿನ ಸ್ಥಳೀಯರು ಹುಡುಕಾಟ ನಡೆಸಿದ್ದಾಗ ನದಿಗೆ ಹಾರಿ ಮೃತಪಟ್ಟಿದ್ದಾರೆ ಎಂದು ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಕಾಸರಗೋಡು ಅಗ್ನಿಶಾಮಕ ದಳ, ಪೊಲೀಸರು ಸ್ಥಳಕ್ಕಾಗಮಿಸಿ ತಾಯಿ ಮರಿಯಮ್ಮ ಮೃತದೇಹ ಪತ್ತೆ ಹಚ್ಚಿದ್ದು, ಪುತ್ರಿ ಮುರ್ಶಿದಾಗಾಗಿ ಶೋಧ ಕಾರ್ಯ ಮುಂದುವರಿಸುತ್ತಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ತಾಯಿ ಮರಿಯುಮ್ಮ ಮೃತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದ್ಲಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಿದೆ.
Next Story