ಎಸ್ಸೆಸ್ಸೆಫ್: 'ಡು ಮಿಯಾ ಮಿಯಾ- ಲೀಡ್ 8 ಕ್ಯಾಂಪ್'

ಬಂಟ್ವಾಳ, ಸೆ. 10: ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಡಿವಿಷನ್ 8 ಪಧಾದಿಕಾರಿಗಳಿಗೆ 'ಡು ಮಿಯಾ ಮಿಯಾ ಲೀಡ್ 8 ಕ್ಯಾಂಪ್' ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಕೆ.ಪಿ. ಸಿರಾಜುದ್ದೀನ್ ಸಖಾಫಿ ಕನ್ಯಾನ ಅವರ ಅಧ್ಯಕ್ಷತೆಯಲ್ಲಿ ಅಲ್ - ಮುನವ್ವರ ಕ್ಯಾಂಪಸ್ ಮೂಡಡ್ಕದಲ್ಲಿ ನಡೆಯಿತು.
ಮೂಡಡ್ಕ ಮುದರಿಸ್ ಸ್ವಲಾಹುದ್ದೀನ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಫೀಕ್ ಸಅದಿ ದೇಲಂಪಾಡಿ ಆಧ್ಯಾತ್ಮಿಕ ತರಗತಿಯನ್ನು ಹಾಗೂ ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಸಂಘಟನಾ ತರಗತಿಯನ್ನು ನಡೆಸಿದರು. ಮೂಡಡ್ಕ ಅಲ್ ಮುನವ್ವರ ಸಂಸ್ಥೆಯ ಮ್ಯಾನೇಜರ್ ಅಶ್ರಫ್ ಸಖಾಫಿ ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್, ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಉಪಾಧ್ಯಕ್ಷರುಗಳಾದ ಶರೀಫ್ ಸ ಅದಿ ಕಿಲ್ಲೂರು, ಇಬ್ರಾಹಿಂ ಸಖಾಫಿ ಸೆರ್ಕಳ, ಕಾರ್ಯದರ್ಶಿಗಳಾದ ಶರೀಫ್ ನಂದಾವರ, ಮಹಮ್ಮದಾಲಿ ತುರ್ಕಳಿಕೆ, ಸಲೀಂ ಹಾಜಿ ಬೈರಿಕಟ್ಟೆ, ಮುತ್ತಲಿಬ್ ವೇಣೂರು ಹಾಗೂ ಇತರರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ ಸ್ವಾಗತಿಸಿ, ಕೊನೆಗೆ ವಂದಿಸಿದರು.







