"ಕೇರಳದ ಜಾತ್ಯತೀತ ಬರಹಗಾರರಿಗೂ ಗೌರಿ ಲಂಕೇಶ್ ಗತಿಯಾಗಬಹುದು"
ವಿವಾದ ಸೃಷ್ಟಿಸಿದ ಶಶಿಕಲಾ ಟೀಚರ್ ಹೇಳಿಕೆ

ಪರವೂರ್, ಸೆ.10: ಕೇರಳದ ಜಾತ್ಯತೀತ ಬರಹಗಾರರು ತಮ್ಮ ಆಯುಷ್ಯಕ್ಕಾಗಿ ಮೃತ್ಯುಂಜಯ ಹೋಮವನ್ನು ಮಾಡಿಸುವುದು ಒಳ್ಳೆಯದು. ಇಲ್ಲದಿದ್ದರೆ ಅವರಿಗೂ ಗೌರಿ ಲಂಕೇಶ್ ರ ಗತಿಯಾಗಬಹುದು ಎಂದಿರುವ ಹಿಂದೂ ಐಕ್ಯವೇದಿಕೆಯ ರಾಜ್ಯ ಅಧ್ಯಕ್ಷೆ ಶಶಿಕಲಾ ಟೀಚರ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ಪರವೂರಿನಲ್ಲಿ ಹಿಂದೂ ಐಕ್ಯವೇದಿಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಶಿಕಲಾ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಘಟನೆಯ ಕುರಿತು ಶಾಸಕ ವಿ.ಡಿ. ಸತೀಶನ್ ಡಿಜಿಪಿಗೆ ದೂರು ನೀಡಿದ್ದು, ಭಾಷಣದ ವೀಡಿಯೊ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ತನ್ನ ಭಾಷಣವನ್ನು ತಿದ್ದಿ ಮಾಧ್ಯಮಗಳು ಪ್ರಸಾರ ಮಾಡಿವೆ ಎಂದು ಶಶಿಕಲಾ ಹೇಳಿದ್ದಾರೆ. ರಾಜ್ಯದ ವಿವಿಧ ಕಡೆಗಳಲ್ಲಿ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಈ ಹಿಂದೆ ಪೊಲೀಸರು ಜಾಮೀನು ರಹಿತ ಸೆಕ್ಷನ್ ಪ್ರಕಾರ ಕೇಸು ಹಾಕಿದ್ದರು.
Next Story





