ಫ್ಲೈ ಓವರ್ ಕುಸಿದು ಬಿದ್ದು ಓರ್ವ ಮೃತ್ಯು: 15ಕ್ಕೂ ಅಧಿಕ ಮಂದಿಗೆ ಗಾಯ

ಹೊಸದಿಲ್ಲಿ, ಸೆ.10: ಫ್ಲೈ ಓವರ್ ಸೇತುವೆಯೊಂದರ ಭಾಗವೊಂದು ಕುಸಿದು ಬಿದ್ದ ಪರಿಣಾಮ ಉದ್ಯಮಿಯೊಬ್ಬರು ಮೃತಪಟ್ಟು 15ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಭುವನೇಶ್ವರದಲ್ಲಿ ಸಂಭವಿಸಿದೆ.
ಉದ್ಯಮಿ ಸತ್ಯ ಪಟ್ನಾಯಕ್ ತನ್ನ ಪುತ್ರಿ ಶೀತಲ್ ಳನ್ನು ನೃತ್ಯ ತರಗತಿಗೆ ಕರೆದುಕೊಂಡು ಹೋಗುತ್ತಿದ್ದಾಗ ಫ್ಲೈ ಓವರ್ ಕುಸಿದು ಬಿದ್ದಿದೆ. ಪರಿಣಾಮ ಸತ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸೇತುವೆಯ ಮೇಲಿದ್ದ ಹಲವಾರು ಕಾರ್ಮಿಕರೂ ಸಹ ಈ ಸಂದರ್ಭ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಕೆಳಗೆ ಬಿದ್ದ ಭಾಗವು ರೈಲ್ವೆ ಮೇಲ್ಸೇತುವೆಯ ಭಾಗವಾಗಿತ್ತು. 3ರಿಂದ ನಾಲ್ಕು ಜನರು ಇನ್ನೂ ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದೆ. ಅವಘಡದಲ್ಲಿ ಮೃತಪಟ್ಟ ಸತ್ಯರ ಕುಟುಂಬಕ್ಕೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ 5 ಲಕ್ಷ ರೂ. ಪರಿಹಾರ ಧನ ಹಾಗೂ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದಾರೆ.
Next Story





