ವೇದಿಕೆ ಕುಸಿದು ಉತ್ತರ ಪ್ರದೇಶ ಸಚಿವ, ನಾಲ್ವರು ಅಧಿಕಾರಿಗಳಿಗೆ ಗಾಯ

ಲಕ್ನೋ, ಸೆ.10: ರೈತರ ಸಾಲಮನ್ನಾ ಪತ್ರ ವಿತರಣೆ ಕಾರ್ಯಕ್ರಮದ ವೇದಿಕೆ ಕುಸಿದುಬಿದ್ದು ಉತ್ತರ ಪ್ರದೇಶ ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಅಶುತೋಷ್ ಟಂಡನ್ ಸೇರಿದಂತೆ ನಾಲ್ವರು ಅಧಿಕಾರಿಗಳು ಗಾಯಗೊಂಡ ಘಟನೆ ನಡೆದಿದೆ.
ಹಿರಿಯ ಅಬಿವೃದ್ಧಿ ಅಧಿಕಾರಿ ಹಕೀಮ್ ಸಿಂಗ್, ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿಶಿರ್ ಶ್ರೀವಾಸ್ತವ್ ಹಾಗೂ ಇಬ್ಬರು ಅಧಿಕಾರಿಗಳೂ ಘಟನೆಯಿಂದ ಗಾಯಗೊಂಡಿದ್ದಾರೆ. ಸಚಿವರು ಭಾಷಣ ಆರಂಭಿಸುತ್ತಿದ್ದಂತೆ ವೇದಿಕೆ ಕುಸಿದಿದೆ ಎನ್ನಲಾಗಿದೆ.
“ಘಟನೆಯ ಬಗ್ಗೆ ತನಿಖೆ ನಡೆಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೂವರು ಸದಸ್ಯರ ತಂಡವೊಂದನ್ನು ರಚಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹೇಮರಾಜ್ ಮೀನಾ ಹೇಳಿದ್ದಾರೆ.
Next Story





