ದೇಯಿ ಬೈದೆತಿ ಮೂರ್ತಿಗೆ ಅವಮಾನ: ಓರ್ವನ ಬಂಧನ

ಪುತ್ತೂರು, ಸೆ. 10: ಬಡಗನ್ನೂರು ಗ್ರಾಮದ ಪಡುಮಲೆ ಔಷಧಿ ವನದಲ್ಲಿರುವ ದೇಯಿ ಬೈದೆತೆ ಮೂರ್ತಿಗೆ ಅವಮಾನ ಮಾಡಿದ ಆರೋಪದಲ್ಲಿ ಓರ್ವನನ್ನು ರವಿವಾರ ಬಂಧಿಸಿರುವ ಸಂಪ್ಯ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪುತ್ತೂರು ತಾಲೂಕಿನ ಈಶ್ವರಮಂಗಲ ನಿವಾಸಿ ರಿಕ್ಷಾ ಚಾಲಕ ಹನೀಫ್(37) ಬಂಧಿತ ಆರೋಪಿ. ಈತ ಪಡುಮಲೆ ಔಷಧಿ ವನದಲ್ಲಿರುವ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿಯ ಮೂರ್ತಿಯ ಪಕ್ಕದಲ್ಲಿ ಕುಳಿತು ಮೂರ್ತಿಯ ಎದೆಯನ್ನು ಮುಟ್ಟುವಂತಹ ಅಶ್ಲೀಲ ಭಂಗಿಯ ಭಾವಚಿತ್ರ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದ ಎಂದು ದೂರಲಾಗಿತ್ತು.
ಈ ಕುರಿತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಕಾರ್ಯದರ್ಶಿ ಕೇಶವ ಪೂಜಾರಿ ಬೆದ್ರಾಳ ಅವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಕೋಮು ಪ್ರಚೋದನೆ ಆರೋಪದಡಿ ಕೇಸು ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
Next Story





