ಇಂದಿನ ವಿದ್ಯಾರ್ಥಿಗಳು ಆಧುನಿಕ ಶೈಲಿಗೆ ಮಾರು ಹೋಗಿದ್ದಾರೆ: ಪ್ರೊ. ಬಿ.ತಿಪ್ಪೇರುದ್ರಪ್ಪ

ಚಿಕ್ಕಮಗಳೂರು, ಸೆ.10: ಶಿಕ್ಷಕ ವೃತ್ತಿಯು ಪವಿತ್ರವಾಗಿದ್ದು ಮತ್ತು ಬೆಲೆಕಟ್ಟಲಾಗದಂತದ್ದು. ಉಪನ್ಯಾಸಕರು ಸದಾ ಅಧ್ಯಯನ ಮಾಡುತ್ತಿರುತ್ತಾನೆ, ಕಲಿಯುತ್ತಿರುತ್ತಾನೆ ಈ ಕಲಿಕೆಯಿಂದ ವೃತ್ತಿಯಲ್ಲಿ ಪ್ರಭುದ್ದತೆ ಬರುತ್ತದೆ ಎಂದು ಪ್ರೊ. ಬಿ.ತಿಪ್ಪೇರುದ್ರಪ್ಪ ತಿಳಿಸಿದ್ದಾರೆ.
ಅವರು ನಗರದ ಪ್ರತಿಷ್ಠಿತ ಶಿಕ್ಷಣಸಂಸ್ಥೆ ಚೇತನ ಲೋಕ ಫೌಂಡೇಶನ್ ನ ಶಿಕ್ಷಣ ಸಂಸ್ಥೆಯಾದ ಪದವಿ ಮತ್ತು ಪಿಯು ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆ ಜೊತೆಗೆ, ರಾಷ್ಟ್ರ ಚಿಂತಕರ ಬಗ್ಗೆ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು. ಇದು ಶಿಕ್ಷಕನ ಆದ್ಯ ಕರ್ತವ್ಯವಾಗಬೇಕು. ಸಮಾಜದಲ್ಲಿ ಪ್ರಗತಿಪರ ಚಟುವಟಿಕೆಗಲ್ಲಿ ತೊಡಗಿ ಕೊಳ್ಳಬೇಕೆಂದರು.
ಅಂದಿನ ಯುವಪೀಳಿಗೆಗೂ ಇಂದಿನ ಯುವಪೀಳಿಗೆಗೂ ಬಹಳಷ್ಟು ಅಂತರವಿದೆ. ಅಂದಿನ ವಿದ್ಯಾರ್ಥಿಗಳು ಗುರುಹಿರಿಯರನ್ನು ಗೌರವದಿಂದ ವಿನಯತೆಯಿಂದ ನಡೆದುಕೊಳ್ಳುವ ಸಂಸ್ಕೃತಿ ಇತ್ತು. ಆದರೆ ಇಂದಿನ ವಿದ್ಯಾರ್ಥಿಗಳು ಆಧುನಿಕ ಶೈಲಿಗೆ ಮಾರುಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ವಾಟ್ಸಾಪ್ ಟ್ವಿಟ್ಟರ್ ಗಳಿಗೆ ದಾಸರಾಗಿದ್ದಾರೆ. ಇದನ್ನು ಕೂಡಲೇ ದೂರವಿಡಬೇಕು ಒಳ್ಳೆಯ ವಿಹಯಕ್ಕೆ ಮಾತ್ರ ಬಳಸಬೇಕೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಚೇತನ್‍ಕುಮಾರ್ ಮಾತನಾಡಿ, ಸರ್ವಪಲ್ಲಿ ರಾಧಾಕೃಷ್ಣರವರು ಮಹಾನ್ ಪ್ರತಿಭಾನ್ವಿತರಾಗಿದ್ದರು ವಿದ್ಯಾರ್ಥಿಗಳೊಂದಿಗೆ ಶಿಕ್ಷಣದ ವಿಷ್ಯದ ಜೊತೆಗೆ ಬದುಕಿನ ಮಜುಲುಗಳನ್ನು ಹಂಚಿಕೊಳ್ಳುತ್ತಿದ್ದರು ಇದರಿಂದ ವಿದ್ಯಾರ್ಥಿಗಳು ವಿಶಿಷ್ಟವಾದ ಗುರುಭಕ್ತಿಯನ್ನು ಹೊಂದಿದ್ದರು. ಗೌರವಾನ್ವಿತ ಮೈಸೂರ್ ವಿಶ್ವವಿದ್ಯಾನಿಲಯದಲ್ಲಿ ಪ್ರಮುಖ ಹುದ್ದೆಯನ್ನು ಅಲಂಕರಿಸಿದ್ದರು ವಿದ್ಯಾರ್ಥಿಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು ಎಂದರು.
ಈ ವೇಳೆ ಶಿಕ್ಷಣೆ ಸೇವೆಯಲ್ಲಿ ತೊಡಗಿರುವ ಸರ್ವಗುರುಗಳಿಗೂ ವಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಎಂ.ಸಿ.ಸತೀಶ್ ಕುಮಾರ್ ಮಾತನಾಡಿದರು. ಕಾರ್ಯಕ್ರಮವನ್ನು ತೃತೀಯ ಬಿಕಾಂ ವಿದ್ಯಾರ್ಥಿನಿ ಸ್ವಾತಿ ನಿರೂಪಿಸಿದರು. ಮತ್ತು ಪ್ರಥಮ ಬಿಕಾಂ ವಿದ್ಯಾರ್ಥಿಯಾದ ಕಿಶೋರ್‍ರಾಜ್ ವಂದಿಸಿದರು. ಉಪನ್ಯಾಸಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ನೆರವೇರಿತು.







