ಚೊಕ್ಕಬೆಟ್ಟು: ಮಾಹಿತಿ ಕೇಂದ್ರ, ವಾರ್ಡ್ ಕಚೇರಿ ಉದ್ಘಾಟನೆ
ಮಂಗಳೂರು, ಸೆ.11: ಎಸ್ಡಿಪಿಐ ವತಿಯಿಂದ ಸುರತ್ಕಲ್ ಸಮೀಪದ ಚೊಕ್ಕಬೆಟ್ಟವಿನಲ್ಲಿ ಮಾಹಿತಿ ಕೇಂದ್ರ ಮತ್ತು ವಾರ್ಡ್ ಕಚೇರಿ ಉದ್ಘಾಟನೆಗೊಂಡಿತು.
ಎಸ್ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ನೂತನ ಕಚೇರಿಯನ್ನು ಉದ್ಘಾಟಿಸಿದರು. ಮನಪಾ ಸದಸ್ಯ ಅಯಾಝ್ ಚೊಕ್ಕಬೆಟ್ಟು, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ನ ಜಾಫರ್ ಸಾದಿಕ್ ಫೈಝಿ, ಎಸ್ಡಿಪಿಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ನೂರುಲ್ಲಾಹ್ ಕುಳಾಯಿ, ಪಿಎಫ್ಐ ದ.ಕ. ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಖಾದರ್, ಪಿಎಫ್ಐ ಸುರತ್ಕಲ್ ವಲಯಾಧ್ಯಕ್ಷ ಅಬ್ದುಲ್ ಅಝೀಝ್ ಸುರತ್ಕಲ್, ಎಸ್ಡಿಪಿಐ ಸುರತ್ಕಲ್ ವಲಯಾಧ್ಯಕ್ಷ ಅಝರ್ ಚೊಕ್ಕಬೆಟ್ಟು, ಇಬ್ರಾಹೀಂ ತಣ್ಣೀರುಬಾವಿ, ಚೊಕ್ಕಬೆಟ್ಟು ಎಂಜೆಎಂ ಜುಮಾ ಸಮೀದಿಯ ಅಧ್ಯಕ್ಷ ಟಿ.ಸಿದ್ದೀಕ್, ಅಬ್ದುಲ್ ಹಮೀದ್, ಶಂಶುದ್ದೀನ್, ಅಡ್ವಕೇಟ್ ಉಮರ್ ಫಾರೂಕ್ ಹಾಗೂ ಇತರರು ಉಪಸ್ಥಿತರಿದ್ದರು.
Next Story