ವಾರ್ತಾಭಾರತಿ ವರದಿಗಾರನ ಬಂಧನ: ಖಂಡನೆ
ಮಂಗಳೂರು, ಸೆ. 10: ‘ವಾರ್ತಾಭಾರತಿ’ ಬಂಟ್ವಾಳ ತಾಲೂಕಿನ ವರದಿಗಾರ ಇಮ್ತಿಯಾಝ್ ಅವರನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ಮಾನವ ಹಕ್ಕುಗಳ ಹೋರಾಟಗಾರ ಶಾಫಿ ಬಬ್ಬುಕಟ್ಟೆ ಮತ್ತು ಎಸ್‌ವೈಎಸ್‌ಎಂ ಕೇಂದ್ರ ಸಮಿತಿಯ ಕಾರ್ಯದರ್ಶಿ ಅಶ್ರಫ್ ಕಿನಾರ ಖಂಡಿಸಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಂಡ ಪೊಲೀಸರ ಬಗ್ಗೆ ವರದಿ ಮಾಡಿದ ಪತ್ರಕರ್ತನನ್ನು ಬಂಧಿಸಿರುವುದು ಖಂಡನೀಯ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





