ಗೌರಿ ಲಂಕೇಶ್ ನಿಧನಕ್ಕೆ ಕಸಾಪದಿಂದ ಶ್ರದ್ಧಾಂಜಲಿ
.jpg)
ಹಾಸನ, ಸೆ.10: ದುಷ್ಕರ್ಮಿಗಳಿಂ ಹತ್ಯೆಯಾದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮೊದಲು ಎರಡು ನಿಮಿಷ ಮೌನ ಆಚರಿಸಿ ಗೌರವ ಸೂಚಿಸಿದರು. ನಾಡಿನ ಶ್ರೇಷ್ಟ ಹಾಗೂ ಸಾಮಾಜಿಕ ಕಳಾಕಳಿ ಹೊಂದಿದ ಲೇಖಕಿ ಗೌರಿಲಂಕೇಶ್ ಸಾವು ಒಂದು ದೊಡ್ಡ ದುರಂತವಾಗಿದೆ. ಅವರ ಬರವಣಿಗೆಯು ಸಮಾಜದ ಉತ್ತಮ ಬೆಳವಣಿಗೆಗ ಪೂರಕವಾಗಿತ್ತು. ಮಹಿಳೆಯನ್ನು ಕಿಡಿಗೇಡಿಗಳು ಹತ್ಯೆ ಮಾಡಿರುವುದು ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಕೊಲೆಗಡುಕರನ್ನು ಸರ್ಕಾರ ಕೂಡಲೇ ಬಂಧಿಸಬೇಕು ಅಲ್ಲದೇ ಇಂತಹ ಕೊಲೆಯ ಹಿಂದೆ ಕೆಲವರ ಕೈವಾಡ ಗಳು ಅಡಗಿರುವುದು ನಿಜಕ್ಕೂ ಸಮಾಜಕ್ಕೆ ಮಾರಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಕೊಲೆ ಪ್ರಕರಣ ನಿಜಕ್ಕೂ ಹೇಯ ಕೃತ್ಯವಾಗಿದ್ದು, ಈಗಾಗಲೇ ರಾಜ್ಯಾದ್ಯಂತ ಇದಕ್ಕೆ ಖಂಡನೆ ವ್ಯಕ್ತವಾಗುತ್ತಿದೆ. ವಿಚಾರವಾದಿಗಳನ್ನು ಕೊಳ್ಳುವಂತಹ ವಾತಾವರಣ ನಿರ್ಮಾಣವಾಗುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರ್ಗಿ ಹತ್ಯೆಯ ಆರೋಪಿಗಳನ್ನು ಇದುವರೆಗೂ ಬಂಧಿಸದೆ ಇರುವುದು ಈ ಕೃತ್ಯ ಎಸಗಲು ಕಾರಣವಾಗಿದೆ ಎಂದು ಹೇಳಿದರು. ಗೌರಿಲಂಕೇಶ್ ಪ್ರಗತಿ ಪರ ಚಿಂತನೆಯಲ್ಲಿ ತೊಡಗಿದವರು. ಕೂಡಲೇ ಸರಕಾರ ಆರೋಪಿಗಳ ಎಲ್ಲಾರನ್ನು ಬಂಧಿಸಿ ಮತ್ತೆ ಇಂತಹ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಕಸಾಪ ಅಧ್ಯಕ್ಷರು ನಾಯಕರಹಳ್ಳಿ ಮಂಜೇಗೌಡ ಹಾಗೂ ಗೌರವಾಧ್ಯಕ್ಷ ರವಿನಾಕಲಗೂಡು ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸಮದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಸತೀಶ್, ಕಾರ್ಯದರ್ಶಿ ಹರೀಶ್, ತಾಲೂಕು ಅಧ್ಯಕ್ಷ ಮಹಾಂತಪ್ಪ, ಜಾವಗಲ್ ಪ್ರಸನ್ನ, ಸಾಹಿತಿ ಚಂದ್ರಕಾಂತ್ ಪಡೆಸೂರು, ಹಿರಿಯ ಪತ್ರಕರ್ತೆ ಲೀಲಾವತಿ, ಕಲಾವತಿ, ಕೆ.ಟಿ. ಜಯಶ್ರೀ, ಎ.ಸಿ. ರಾಜು ಇತರರು ಪಾಲ್ಗೊಂಡಿದ್ದರು.







