ಬೆಂಗಳೂರು: ನಿಲ್ಲದ ಮಳೆ, ತಪ್ಪದ ಸಂಕಷ್ಟ..!
ಬೆಂಗಳೂರಿನಲ್ಲಿ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನತೆ ನಿದ್ದೆ ಇಲ್ಲದೆ, ಅಡುಗೆಯೂ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ನಾಲ್ವರು ಮೃತಪಟ್ಟಿದ್ದು, ಇದರಿಂದ ಬೆಚ್ಚಿ ಬಿದ್ದಿರುವ ಬೆಂಗಳೂರು ಜನತೆ ಶನಿವಾರದ ಬೆಳಗಿನ ಬಿಸಿಲು ಸ್ವಲ್ಪ ಚೇತರಿಕೆ ನೀಡಿತ್ತು. ಸಂಜೆಯ ವರೆಗೆ ಮಳೆ ಬರುವ ಯಾವುದೇ ಲಕ್ಷಣ ಕಂಡು ಬಂದಿಲ್ಲದಿದ್ದುದರಿಂದ ಖುಷಿಯಲ್ಲಿದ್ದ ಜನತೆಗೆ ಶನಿವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಯಿಂದ ಮತ್ತೊಮ್ಮೆ ಸಂಕಷ್ಟಕ್ಕೀಡಾದರು.
Next Story





