2,000 ಕೋ.ರೂ. ಠೇವಣಿ ಇಡಲು ಜೇಪೀ ಇನ್‌ಫ್ರಾಟೆಕ್‌ಗೆ ಸುಪ್ರೀಂ ಸೂಚನೆ

ಹೊಸದಿಲ್ಲಿ, ಸೆ.11: ಅಕ್ಟೋಬರ್ 27ರ ಒಳಗೆ 2,000 ಕೋಟಿ ರೂ. ಠೇವಣಿ ಇಡುವಂತೆ ರಿಯಲ್ ಎಸ್ಟೇಟ್ ಸಂಸ್ಥೆ ಜೇಪೀ ಇನ್‌ಫ್ರಾಟೆಕ್‌ಗೆ ಸುಪ್ರೀಂಕೋರ್ಟ್ ಸೂಚಿಸಿದ್ದು, ಸಂಸ್ಥೆಯ ದಿವಾಳಿತನ ಪ್ರಕ್ರಿಯೆಯನ್ನು ಮುಂದುವರಿಸಲು ಅವಕಾಶ ನೀಡಿದೆ.
ಅಲ್ಲದೆ ಎನ್‌ಸಿಎಲ್‌ಟಿ(ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯೂನಲ್) ನೇಮಿಸಿರುವ ಮಧ್ಯಾಂತರ ಪರಿಹಾರ ಅಧಿಕಾರಿಗಳು ಸಂಸ್ಥೆಯ ಆಡಳಿತ ನಿರ್ವಹಣೆಯನ್ನು ಕೈಗೆತ್ತಿಕೊಳ್ಳುವಂತೆ ಹಾಗೂ ಸಾಲಗಾರರು ಮತ್ತು ಸ್ಥಳೀಯ ಖರೀದಿಗಾರರ ಹಿತಾಸಕ್ತಿಯನ್ನು ರಕ್ಷಿಸುವಂತೆ ಸುಪ್ರೀಂ ಸೂಚಿಸಿದೆ.
ಗ್ರಾಹಕರ ಆಯೋಗ ಸೇರಿದಂತೆ ಇತರ ವೇದಿಕೆಗಳಲ್ಲಿ ಸಂಸ್ಥೆಯ ವಿರುದ್ಧ ನಡೆಸಲಾಗುತ್ತಿರುವ ವಿಚಾರಣೆಗೆ ತಡೆಯಾಜ್ಞೆ ನೀಡಿರುವ ಸುಪ್ರೀಂಕೋರ್ಟ್, ತನ್ನ ಪೂರ್ವಾನುಮತಿ ಪಡೆಯದೆ ದೇಶ ಬಿಟ್ಟು ತೆರಳದಂತೆ ಜೇಪೀ ಇನ್‌ಫ್ರಾಟೆಕ್‌ನ ಆಡಳಿತ ನಿರ್ದೇಶಕರು ಹಾಗೂ ನಿರ್ದೇಶಕರಿಗೆ ಸೂಚಿಸಿದೆ.
Next Story





