ಪತ್ರಕರ್ತರು ಏನು ಬರೆಯಬೇಕೆಂಬುದನ್ನು ಪೊಲೀಸರು ನಿರ್ಧರಿಸುವುದು ಬೇಡ: ವಿಷ್ಣು ಉಪಾಧ್ಯಾಯ

ಮೂಡುಬಿದಿರೆ, ಸೆ.11: ಪತ್ರಕರ್ತರು ಸಮಾಜದಲ್ಲಿ ನಡೆಯುವ ಘಟನೆಗಳನ್ನು ವರದಿ ಮಾಡಲು ಸಂವಿಧಾನದ ಅಡಿಯಲ್ಲಿ ಸ್ವತಂತ್ರರಿದ್ದು ಅದನ್ನು ಹತ್ತಿಕ್ಕಲು ಪೊಲೀಸ್ ಬಲ ಪ್ರಯೋಗಿಸಿರುವುದು ಅತಿರೇಕದ ವರ್ತನೆಯಾಗಿದೆ. 'ವಾರ್ತಾಭಾರತಿ' ಪತ್ರಿಕೆಯ ವರದಿಗಾರನ ಬಂಧನ ಖಂಡನೀಯ. ಈ ಘಟನೆ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾರಕವಾಗಿದೆ ಎಂದು ಪತ್ರಕರ್ತ ಹಾಗೂ ಟ್ರೇಡ್ ಯೂನಿಯನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ವಿಷ್ಣು ಉಪಾಧ್ಯಾಯ ಹೇಳಿದ್ದಾರೆ.
ಪತ್ರಕರ್ತರು ಏನನ್ನು ಬರೆಯಬೇಕೆಂಬುದನ್ನು ಪೊಲೀಸರು ನಿರ್ಧರಿಸುವ ಅಗತ್ಯ ಖಂಡಿತ ಇಲ್ಲ. ಅಧಿಕಾರಿಗಳು ಮಾಧ್ಯಮಗಳನ್ನು ಬೆದರಿಸುವ ತಂತ್ರಗಳನ್ನು ಕೈ ಬಿಡದಿದ್ದಲ್ಲಿ ಪತ್ರಕರ್ತರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಡಬೇಕಾಗುತ್ತದೆ ಎಂದರು.
Next Story





