ದೇವಾಲಯದಲ್ಲಿ ಕಳವು: ಆರೋಪಿ ಬಂಧನ
ಮಂಡ್ಯ, ಸೆ.11: ಮಳವಳ್ಳಿ ಪಟ್ಟಣದ ಹೊರವಲಯದ ಮಾರೇಹಳ್ಳಿ ಬೀರೇಶ್ವರ ದೇವಾಲಯದಲ್ಲಿ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿ ಶ್ಯಾಂ ಅಲಿಯಾಸ್ ಸೋಲಾರ್ ಬಂಧಿತ ಆರೋಪಿ.
ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಮಳವಳ್ಳಿ ಪಿಎಸ್ಸೈ ರವಿಕುಮಾರ್ ತಿಳಿಸಿದ್ದಾರೆ.
ಆರೋಪಿ ಶ್ಯಾಂ ಮಳವಳ್ಳಿ ಸುತ್ತಮುತ್ತ ಗಾರೆಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಆ.27ರ ತಡರಾತ್ರಿ ಪಟ್ಟಣದ ಬೀರೇಶ್ವರ ದೇವಸ್ಥಾನದ ಬಾಗಿಲು ಮುರಿದು ದೇವರ ವಿಗ್ರಹದ ಮೇಲಿದ್ದ 11 ಚಿನ್ನದ ತಾಳಿ, 4 ಗುಂಡುಗಳು ಹಾಗೂ ದೇವರ ಹುಂಡಿ ಹೊಡೆದು ಹಣವನ್ನು ದೋಚಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಧೀಶರು ಆದೇಶಿಸಿದ್ದಾರೆ.
Next Story





