ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಬಿಜೆಪಿ ಕಾರ್ಪೊರೇಟರ್
ಪೊಲೀಸರಿಗೆ ದೂರು ನೀಡಿದ ಮಹಿಳೆ

ಕಲ್ಯಾಣ್, ಸೆ.11: ತಾನು ಮದುವೆಯಾಗಿರುವ ವಿಚಾರವನ್ನು ಬಚ್ಚಿಟ್ಟು ಮದುವೆಯಾಗುವ ಭರವಸೆ ನೀಡಿ ಬಿಜೆಪಿಯ ಕಾರ್ಪೊರೇಟರ್ ಒಬ್ಬ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿರುವುದಾಗಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಲ್ಯಾಣ್-ಡೊಂಬಿವಿಲಿಯ ಮುನಿಸಿಪಲ್ ಕಾರ್ಪೊರೇಶನ್ ನ ಬಿಜೆಪಿ ಕಾರ್ಪೊರೇಟರ್ ದಯಾ ಗಾಯಕ್ವಾಡ್ ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಗಾಯಕ್ವಾಡ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ.
ಆದರೆ ಈ ಬಗ್ಗೆ ಗಾಯಕ್ವಾಡ್ ಪ್ರತಿಕ್ರಿಯೆ ನೀಡಿದ್ದು, “ಅತ್ಯಾಚಾರದ ಆರೋಪ ಸುಳ್ಳು. ಆಕೆ 10 ಲಕ್ಷ ರೂ. ಬೇಡಿಕೆಯಿಟ್ಟಿದ್ದಳು. ಆದರೆ ಹಣ ನೀಡದೆ ಇದ್ದುದರಿಂದ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದಳು” ಎಂದಿದ್ದಾರೆ.
ಥಾಣೆ ಪೊಲೀಸ್ ಮುಖ್ಯಸ್ಥರನ್ನು ಭೇಟಿಯಾಗಿ ಮಹಿಳೆ ದೂರು ನೀಡಿದ ದಿನವೇ ಗಾಯಕ್ವಾಡ್ ಕೂಡ ಮಹಿಳೆಯ ವಿರುದ್ಧ ದೂರು ನೀಡಿದ್ದಾನೆ.
Next Story





