ಮಿಲ್ಲತ್ ಕೋ ಅಪರೇಟಿವ್ ಸೊಸೈಟಿ ಮಹಾಸಭೆ

ಮಂಗಳೂರು, ಸೆ.11: ನಗರದ ಮಿಲ್ಲತ್ ಕೋ ಅಪರೇಟಿವ್ ಸೊಸೈಟಿಯ 27ನೆ ವಾರ್ಷಿಕ ಮಹಾಸಭೆ ಮುಸ್ಲಿಂ ಸೆಂಟ್ರಲ್ ಕಮಿಟಿ ಸಭಾಂಗಣದಲ್ಲಿ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಬಿ.ಇಬ್ರಾಹೀಂ ಅಧ್ಯಕ್ಷತೆ ವಹಿಸಿದ್ದರು. ಬೋಳಾರು ಮಸೀದಿಯ ಖತೀಬ್ ಸಭೆಗೆ ಚಾಲನೆ ನೀಡಿದರು. ಸಂಘದ ನಿರ್ದೇಶಕ ಎನ್.ಪಿ.ಪುಷ್ಪರಾಜ್ ಸ್ವಾಗತಿಸಿದರು. ಕಾರ್ಯದರ್ಶಿ ಶೆರಿನ್ ಬಾನು ವರದಿ ವಾಚಿಸಿದರು. ಇದೇ ಸಂದರ್ಭದಲ್ಲಿ ಶೇ. 11 ಡಿವಿಡೆಂಡ್ ಘೋಷಿಸಲಾಯಿತು.
ಸಂಘದ ನಿರ್ದೇಶಕರಾದ ಅಬ್ದುಸ್ಸಲಾಂ, ಅಬ್ದುರ್ರಝಾಕ್, ನಿಸಾರ್ ಫಕೀರ್ ಮುಹಮ್ಮದ್, ಶಕೀಲ್ ಮಝ್ಹರ್, ಅಬ್ದುಲ್ಲಾ ಬಿನ್ ಅಮೀನ್, ಮುನೀರ್ ಅಹ್ಮದ್, ನವಾಝ್ ಅಬ್ಬಾಸ್, ಶಾಹಿದಾ ಬಾನು ಹಾಗೂ ಸಂಘದ ಸಿಬ್ಬಂದಿ ವರ್ಗ, ಸದಸ್ಯರು ಉಪಸ್ಥಿತರಿದ್ದದರು.
Next Story





