ಸಾತ್ವಿಕ್ ಶರ್ಮ ಕರಾಟೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು, ಸೆ. 11: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸಾತ್ವಿಕ ಶರ್ಮ ವಿದ್ಯಾಭಾರತಿ ವತಿಯಿಂದ ನಡೆಯುವ ಕರಾಟೆ ಸ್ಪರ್ಧೆಯಲ್ಲಿ 17ರ ವಯೋಮಾನದ ಹುಡುಗರ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅ.28ರಿಂದ 30ರ ವರೆಗೆ ಮಧ್ಯಪ್ರದೇಶದ ದೆವೊಸ್ ಎಂಬಲ್ಲಿ ಜರಗುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಇನ್ಸ್‌ಟ್ಯೂಟ್ ಆಫ್ ಕರಾಟೆ ಆಂಡ್ ಮಾರ್ಷಲ್ ಆರ್ಟ್ಸ್ ಇದರ ಸೆನ್ಸಾಯಿ ನಿತಿನ್ ಎನ್. ಸುವರ್ಣ ಇವರಿಂದ ತರಬೇತಿ ಪಡೆಯುತ್ತಿದ್ದಾರೆ. ಇವರು ಪುತ್ತೂರಿನ ರಾಜೇಶ್ ಶರ್ಮ ಹಾಗೂ ಸೀಮಾ ದಂಪತಿಗಳ ಪುತ್ರ.
Next Story





