ಇ-ಸಿಗರೆಟ್‌ನಿಂದ ಹೃದಯಾಘಾತ ಅಪಾಯ ಅಧಿಕ

ಲಂಡನ್, ಸೆ. 11: ನಿಕೊಟಿನ್‌ಯುಕ್ತ ಇ-ಸಿಗರೆಟ್‌ಗಳ ಸೇವನೆಯಿಂದ ರಕ್ತನಾಳಗಳು ಬಿರುಸುಗೊಳ್ಳಬಹುದು ಹಾಗೂ ಅದು ಭವಿಷ್ಯದಲ್ಲಿ ಹೃದಯಾಘಾತ ಮತ್ತು ಪಕ್ಷವಾತಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಸರಾಸರಿ 26 ವರ್ಷ ವಯಸ್ಸಿನ ಯುವಕರ ಮೇಲೆ ಸಂಶೋಧನೆ ನಡೆಸಸಲಾಯಿತು.
‘‘ಫಲಿತಾಂಶವು ಪ್ರಾಥಮಿಕ ಹಂತದಲ್ಲಿದೆ. ಆದರೆ, ನಿಕೊಟಿನ್‌ಯುಕ್ತ ಇ-ಸಿಗರೆಟ್‌ಗಳನ್ನು ಸೇದಿದ ಸ್ವಯಂಸೇವಕರ ಹೃದಯದ ಬಡಿತ ಮತ್ತು ರಕ್ತದೊತ್ತಡದಲ್ಲಿ ಗಮನಾರ್ಹ ಹೆಚ್ಚಳವಾಗಿರುವುದನ್ನು ನಾವು ಕಂಡುಕೊಂಡಿದ್ದೇವೆ. ನಿಕೊಟಿನ್‌ಯುಕ್ತ ಇ- ಸಿಗರೆಟ್ ಸೇವಿಸಿದವರ ರಕ್ತನಾಳದ ಬಿರುಸುತನ ನಿಕೊಟಿನ್‌ಮುಕ್ತ ಇ-ಸಿಗರೆಟ್ ಸೇದಿದವರಿಗಿಂತ ಮೂರು ಪಟ್ಟು ಅಧಿಕವಾಗಿದೆ’’ ಎಂದು ಸ್ವೀಡನ್‌ನ ಕ್ಯಾರೊಲಿನ್‌ಸ್ಕ ಇನ್‌ಸ್ಟಿಟ್ಯುಟ್‌ನ ಪ್ರಧಾನ ಸಂಶೋಧಕ ಮ್ಯಾಗ್ನಸ್ ಲಂಡ್‌ಬ್ಯಾಕ್ ಹೇಳಿದರು.
Next Story





