ಆಸ್ಟ್ರೇಲಿಯಾದ ಕುರಿ ಮಾಂಸದ ಜಾಹೀರಾತಿನಲ್ಲಿ ಗಣಪತಿ: ಭಾರತೀಯರ ಆಕ್ರೋಶ

ಸಿಡ್ನಿ, ಸೆ. 11: ಹಿಂದೂ ದೇವರಾದ ಗಣಪತಿ ಹಾಗೂ ಇತರ ಧರ್ಮಗಳ ಪುಣ್ಯ ಪುರುಷರು ಕುರಿ ಮಾಂಸವನ್ನು ತಿನ್ನುವಂತೆ ಕರೆ ನೀಡುವ ಆಸ್ಟ್ರೇಲಿಯದ ಜಾಹೀರಾತಿನ ವಿರುದ್ಧ ಭಾರತ ಅಧಿಕೃತವಾಗಿ ದೂರು ಸಲ್ಲಿಸಿದೆ.
ಮೀಟ್ ಆ್ಯಂಡ್ ಲೈವ್‌ಸ್ಟಾಕ್ ಆಸ್ಟ್ರೇಲಿಯ ಎಂಬ ಕಂಪೆನಿಯ ಟಿವಿ ಜಾಹೀರಾತಿನಲ್ಲಿ, ಗಣಪತಿ, ಜೀಸಸ್, ಬುದ್ಧ ಮತ್ತು ಸಾಯಿಂಟಾಲಜಿ ಸ್ಥಾಪಕ ಎಲ್. ರಾನ್ ಹಬರ್ಡ್ ಜೊತೆಗೆ ಕೂತು ಕುರಿ ಮಾಂಸದ ಊಟ ಮಾಡುವ ದೃಶ್ಯಗಳಿವೆ.
ಸಸ್ಯಾಹಾರಿ ಎಂಬುದಾಗಿ ಭಾವಿಸಲಾಗಿರುವ ಗಣಪತಿಯನ್ನು ಈ ಜಾಹೀರಾತಿನಲ್ಲಿ ಬಳಸಿಕೊಂಡಿರುವುದಕ್ಕೆ ಆಸ್ಟ್ರೇಲಿಯದ ಭಾರತೀಯ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.
ಆಸ್ಟ್ರೇಲಿಯ ಸರಕಾರದೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ ಎಂದು ಕ್ಯಾನ್‌ಬೆರದಲ್ಲಿರುವ ಭಾರತೀಯ ಹೈಕಮಿಶನ್ ಹೇಳಿದರು.
Next Story





