ಅನಧಿಕೃತ ಪ್ರಯಾಣ: 10 ಲಕ್ಷ ರೂ.ಗಳಷ್ಟು ದಂಡ ವಸೂಲಿ
ಬೆಂಗಳೂರು, ಸೆ.12: ನಗರದ ಬಿಎಂಟಿಸಿ ಬಸ್‌ಗಳಲ್ಲಿ ತಪಾಸಣೆ ನಡೆಸಿರುವ ಅಧಿಕಾರಿಗಳು ಟಿಕೆಟ್ ರಹಿತ ಅನಧಿಕೃತವಾಗಿ ಪ್ರಯಾಣಿಸುತ್ತಿದ್ದ 7265 ಪ್ರಯಾಣಿಕರಿಂದ 10.89 ಲಕ್ಷ ರೂ.ಗಳಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ.
ಆಗಸ್ಟ್ ತಿಂಗಳಿನಲ್ಲಿ 23,065 ಟ್ರಿಪ್‌ಗಳನ್ನು ತಪಾಸಣೆ ನಡೆಸಿರುವ ಅಧಿಕಾರಿಗಳು 7265 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ 10,89,650 ರೂ.ಗಳು ದಂಡ ವಸೂಲಿ ಮಾಡಲಾಗಿದೆ. ಅಲ್ಲದೆ, 2039 ಬಸ್ ನಿರ್ವಾಹಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಜೊತೆಗೆ, ಮಹಿಳಾ ಪ್ರಯಾಣಿಕರಿಗಾಗಿ ಮೀಸಲಿಟ್ಟಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸುತ್ತಿದ್ದ 365 ಪುರುಷರಿಂದ 36,500 ರೂ.ಗಳನ್ನು ಮೋಟಾರು ವಾಹನ ಕಾಯ್ದೆ ಅಡಿ ದಂಡ ವಿಧಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





