ಬೆಂಗಳೂರು : ಉದ್ಯೋಗಿ ಆತ್ಮಹತ್ಯೆ

ಬೆಂಗಳೂರು, ಸೆ.12: ಜೀವನದಲ್ಲಿ ಜಿಗುಪ್ಸೆಗೊಂಡ ಖಾಸಗಿ ಕಂಪೆನಿ ಉದ್ಯೋಗಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಂಗಮ್ಮನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೇರಳ ಮೂಲದ ಯರ್ನಾಕುಲಂ ನಿವಾಸಿ ಜ್ಯೋತಿನ್‌ಜೋಸೆಫ್ (28) ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ ಎನ್ನಲಾಗಿದೆ.
ಅಯ್ಯಪ್ಪನಗರದ ಬಾಲಾಜಿ ಕಟ್ಟಡದ ನಂ.11ರಲ್ಲಿ ವಾಸವಾಗಿದ್ದ ಜ್ಯೋತಿನ್ ಜೋಸೆಫ್ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಅವರು ಅಮೆರಿಕದಲ್ಲಿರುವ ಸಹೋದರನಿಗೆ ನಾನು ಒಬ್ಬಂಟಿಗ. ನನಗೆ ಸ್ನೇಹಿತರ್ಯಾರೂ ಇಲ್ಲ. ಜೀವನ ಬೇಸರವಾಗಿದೆ. ಆದ್ದರಿಂದ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿ ನಂತರ ಮದ್ಯದಲ್ಲಿ ವಿಷ ಬೆರೆಸಿ ಅದನ್ನು ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶವವನ್ನು ಅಂಬೇಡ್ಕರ್ ಆಸ್ಪತ್ರೆಯಲ್ಲಿರಿಸಲಾಗಿದೆ. ಈ ಸಂಬಂಧ ಗಂಗಮ್ಮನಗುಡಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story





