ಐಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಕೇರಳದ ಕ್ಯಾಥೊಲಿಕ್ ಪಾದ್ರಿಯ ರಕ್ಷಣೆ

ಹೊಸದಿಲ್ಲಿ, ಸೆ.12: ಯಮನ್ ನಲ್ಲಿ ಐಸಿಸ್ ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿದ್ದ ಕೇರಳದ ಕ್ಯಾಥೊಲಿಕ್ ಪಾದ್ರಿ ಟಾಮ್ ಉಳುನ್ನಲಿಲ್ ರನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
“ಟಾಮ್ ಉಳುನ್ನಲಿಲ್ ರನ್ನು ರಕ್ಷಿಸಲಾಗಿದೆ ಎಂದು ತಿಳಿಸುವುದಕ್ಕೆ ಸಂತೋಷವಾಗುತ್ತಿದೆ” ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
2016ರ ಮಾರ್ಚ್ 4ರಂದು ವೃದ್ಧಾಶ್ರಮದ ಮೇಲೆ ದಾಳಿ ನಡೆಸಿದ್ದ ಐಸಿಸ್ ಉಗ್ರರು ಪಾದ್ರಿ ಟಾಮ್ ಉಳುನ್ನಲಿಲ್ ರನ್ನು ಅಪಹರಿಸಿದ್ದರು. ಈ ದಾಳಿಯಲ್ಲಿ 16 ಮಂದಿ ಮೃತಪಟ್ಟಿದ್ದರು. ಉಳುನ್ನಲಿಲ್ ಕೇರಳದ ಕೊಟ್ಟಾಯಂ ಜಿಲ್ಲೆಯ ರಾಮಪುರಂ ಗ್ರಾಮದವರು.
ಒಮನ್ ಸರಕಾರದ ಹಸ್ತಕ್ಷೇಪದಿಂದಾಗಿ ಉಳುನ್ನಲಿಲ್ ರನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ಒಮನ್ ನ ಮಾಧ್ಯಮಗಳು ಈ ಸುದ್ದಿಯನ್ನು ಖಚಿತಪಡಿಸಿದ್ದು, ಅವರ ಫೋಟೊವನ್ನು ಬಿಡುಗಡೆ ಮಾಡಿದೆ.
Next Story





