ಇಂಗ್ಲಿಷ್‌ನಲ್ಲಿ ಮಾತನಾಡಿದ್ದಕ್ಕೆ ವ್ಯಕ್ತಿಗೆ ಹಲ್ಲೆ

ಹೊಸದಿಲ್ಲಿ, ಸೆ.11: ನಿರರ್ಗಳವಾಗಿ ಇಂಗ್ಲಿಷ್ ಮಾತಾಡಿದ ಕಾರಣಕ್ಕೆ ಓರ್ವ ವ್ಯಕ್ತಿಯ ಮೇಲೆ ಐವರು ಹಲ್ಲೆ ನಡೆಸಿರುವ ಘಟನೆ ದಿಲ್ಲಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೊಯ್ಡ ನಿವಾಸಿ ವರುಣ್ ಗುಲಾಟಿ ಎಂಬಾತ ತನ್ನ ಸ್ನೇಹಿತ ಅಮನ್‌ನನ್ನು ಕನ್ನಾಟ್‌ಪ್ಲೇಸ್‌ನಲ್ಲಿರುವ ಪಂಚತಾರಾ ಹೋಟೆಲಿಗೆ ತಲುಪಿಸಿದ ಬಳಿಕ ಹಿಂತಿರುಗಲು ಅಣಿಯಾಗುತ್ತಿದ್ದಾಗ ಅಲ್ಲಿಗೆ ಬಂದ ಐವರು ವ್ಯಕ್ತಿಗಳಿದ್ದ ತಂಡವೊಂದು ಇಂಗ್ಲಿಷ್‌ನಲ್ಲಿ ಮಾತಾಡುವುದು ಯಾಕೆಂದು ಪ್ರಶ್ನಿಸಿದೆ. ಆ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಗುಲಾಟಿಯನ್ನು ಥಳಿಸಲಾಗಿದೆ. ಬಳಿಕ ತಂಡ ಸ್ಥಳದಿಂದ ಕಾಲ್ಕಿತ್ತಿದ್ದು ಗುಲಾಟಿ ಅವರ ವಾಹನದ ನೋಂದಣಿ ಸಂಖ್ಯೆಯನ್ನು ಗುರುತಿಸಿಕೊಂಡಿದ್ದಾನೆ. ಈ ಆಧಾರದಲ್ಲಿ ಮೂವರನ್ನು ಬಂಧಿಸಲಾಗಿದ್ದು ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





