ಸ್ಟೀವ್ ಸ್ಮಿತ್ ಗಿಂತಲೂ ಕೊಹ್ಲಿ 'ಉತ್ತಮ ಬ್ಯಾಟ್ಸ್ ಮೆನ್’ ಎಂದ ಆಸ್ಟ್ರೇಲಿಯಾದ ಮಾಜಿ ನಾಯಕ

ಹೊಸದಿಲ್ಲಿ, ಸೆ.12: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರ ಬ್ಯಾಟಿಂಗ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಪ್ರಪಂಚ ಕಂಡ ಉತ್ತಮ ಬ್ಯಾಟ್ಸ್ ಮೆನ್ ಗಳಲ್ಲಿ ಅವರೂ ಒಬ್ಬರು. ಅದೇ ರೀತಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಕೂಡ ಉತ್ತಮ ಬ್ಯಾಟ್ಸ್ ಮೆನ್. ಇವರಿಬ್ಬರಲ್ಲಿ ಯಾರು ಉತ್ತಮ ಬ್ಯಾಟ್ಸ್ ಮೆನ್ ಎಂಬ ಪ್ರಶ್ನೆಗೆ, “ಸ್ಟೀವ್ ಸ್ಮಿತ್ ಗಿಂತಲೂ ವಿರಾಟ್ ಕೊಹ್ಲಿ ಉತ್ತಮ ಬ್ಯಾಟ್ಸ್ ಮೆನ್” ಎಂದು ಉತ್ತರ ನೀಡಿದ್ದಾರೆ.
ಈ ಉತ್ತರ ನೀಡಿದವರು ಬೇರ್ಯಾರೂ ಅಲ್ಲ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್.
ಏಕದಿನ ಕ್ರಿಕೆಟ್ ನ ವಿಷಯಕ್ಕೆ ಬರುವುದಾದರೆ ಸ್ಟೀವ್ ಸ್ಮಿತ್ ಗಿಂತಲೂ ಕೊಹ್ಲಿ ಉತ್ತಮ ಬ್ಯಾಟ್ಸ್ ಮೆನ್ ಎಂದು ಕ್ಲಾರ್ಕ್ ಹೇಳಿದ್ದಾರೆ. “ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಸ್ಟೀವ್ ಗಿಂತಲೂ ಮುಂದಿದ್ದಾರೆ ಹಾಗೂ ಉತ್ತಮ ಬ್ಯಾಟ್ಸ್ ಮೆನ್ ಆಗಿದ್ದಾರೆ. ಆದರೆ ಸ್ಮಿತ್ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಬ್ಯಾಟ್ಸ್ ಮೆನ್ ಎಮದು ನಾನು ನಂಬುತ್ತೇನೆ” ಎಂದು ಕ್ಲಾರ್ಕ್ ಹೇಳಿದ್ದಾರೆ.
“ಮುಂದಿನ ಕೆಲದಿನಗಳಲ್ಲಿ ಎಲ್ಲರೂ ವಿರಾಟ್ ಹಾಗೂ ಸ್ಮಿತ್ ಬಗ್ಗೆ ಮಾತನಾಡಲು ಬಯಸುತ್ತಾರೆ. ಆದರೆ ಕೊನೆಗೆ ಯಾವ ತಂಡ ಜಯಿಸಲಿದೆ ಎನ್ನುವುದು ಮುಖ್ಯವಾಗುತ್ತದೆ. ಕೊಹ್ಲಿ ಅಥವಾ ಸ್ಮಿತ್ ಯಾರು ರನ್ ಗಳಿಸುತ್ತಾರೆ ಎನ್ನುವುದು ಲೆಕ್ಕಕ್ಕೆ ಬರುವುದಿಲ್ಲ. ಬದಲಾಗಿ, ನಾಯಕನಾಗಿ ತಂಡವನ್ನು ಗೆಲ್ಲಿಸುವುದು ಮುಖ್ಯವಾಗುತ್ತದೆ” ಎಂದವರು ಹೇಳಿದ್ದಾರೆ.







