Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ದೇಶದಲ್ಲಿ ಹಿಂಸೆಯ ನಗ್ನ ನರ್ತನ...

ದೇಶದಲ್ಲಿ ಹಿಂಸೆಯ ನಗ್ನ ನರ್ತನ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಮೌನವಹಿಸುತ್ತಾರೆ: ಮೇಧಾ ಪಾಟ್ಕರ್ ಆಕ್ರೋಶ

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿರೋಧ ಸಮಾವೇಶ

ವಾರ್ತಾಭಾರತಿವಾರ್ತಾಭಾರತಿ12 Sept 2017 8:03 PM IST
share
ದೇಶದಲ್ಲಿ ಹಿಂಸೆಯ ನಗ್ನ ನರ್ತನ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಮೌನವಹಿಸುತ್ತಾರೆ: ಮೇಧಾ ಪಾಟ್ಕರ್ ಆಕ್ರೋಶ

ಬೆಂಗಳೂರು, ಸೆ.12: ದೇಶದಲ್ಲಿ ಹಿಂಸೆಯ ನಗ್ನ ನರ್ತನ ನಡೆಯುತ್ತಿದೆ. ಇಡೀ ದೇಶ ಮಾತನಾಡುತ್ತಿದೆ, ಪ್ರಶ್ನೆ ಮಾಡುತ್ತಿದೆ. ಆದರೂ, ಪ್ರಧಾನಿ ನರೇಂದ್ರಮೋದಿ ಯಾಕೆ ಮೌನವಹಿಸಿದ್ದಾರೆ ಎಂದು ನರ್ಮದಾ ಬಚಾವೋ ಆಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆಯಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದ ಪ್ರತಿರೋಧ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗೋವಾದಲ್ಲಿರುವ ಸನಾತನ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಹಿಂದೂಗಳನ್ನು ಹೊರತುಪಡಿಸಿ ಉಳಿದ ಎಲ್ಲ ಧರ್ಮಗಳ ಅನುಯಾಯಿಗಳನ್ನು ಹತ್ಯೆ ಮಾಡಬೇಕು ಎಂದು ಬರೆಯಲಾಗಿದೆ. ದಾಭೋಲ್ಕರ್‌ರಿಂದ ಗೌರಿ ಲಂಕೇಶ್‌ವರೆಗೆ ಆಗಿರುವ ಹತ್ಯೆಗಳನ್ನು ಯಾರು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುತ್ತಿದ್ದಾರೆ ಎಂಬುದು ಗೊತ್ತಿದೆ ಎಂದು ಅವರು ಹೇಳಿದರು.

ಗೌರಿ ಲಂಕೇಶ್ ಹತ್ಯೆ ಕುರಿತು ಇತಿಹಾಸ ತಜ್ಞ ರಾಮಚಂದ್ರಗುಹಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ನಮ್ಮ ವಿರುದ್ಧವು ಪ್ರಕರಣಗಳನ್ನು ದಾಖಲಿಸಿ, ಈಗಾಗಲೆ ಹಲವಾರು ಪ್ರಕರಣಗಳು ನಮ್ಮ ಮೇಲಿವೆ ಎಂದು ಮೇಧಾಪಾಟ್ಕರ್ ಸವಾಲು ಹಾಕಿದರು. ಯಾವುದೆ ಹತ್ಯೆಯಾದಾಗ ಕುಟುಂಬದವರು ಯಾರ ಮೇಲಾದರೂ ಶಂಕೆ ವ್ಯಕ್ತಪಡಿಸುತ್ತಾರೆ. ಅದೇ ರೀತಿ ಲಂಕೇಶ್‌ಪತ್ರಿಕೆಯ ಓದುಗರು, ಅವರ ವಿಚಾರಗಳನ್ನು ಮಾರ್ಗದರ್ಶನವಾಗಿ ಸ್ವೀಕರಿಸಿರುವವರು, ತಮ್ಮ ಮನಸ್ಸಿನಲ್ಲಿ ಇರುವ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ನಾವು ಕಣ್ಣು, ಕಿವಿ ಮುಚ್ಚಿಕೊಂಡು ಕೂತಿರುವವರಲ್ಲ, ಮೂಲಭೂತವಾದಿಗಳಿಂದಲೆ ಈ ಹತ್ಯೆ ನಡೆದಿದೆ ಎಂದು ಮೇಧಾಪಾಟ್ಕರ್ ಕಿಡಿಗಾರಿದರು.

ನಾವು ಶೋಕಸಭೆಗಾಗಿ ಬಂದಿಲ್ಲ, ಇದು ನಮ್ಮ ಪಾಲಿಗೆ ಸಂಕಲ್ಪ ಸಮಾವೇಶ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣದಲ್ಲಿ ಮಾಡಿರುವ ಪ್ರಯತ್ನವನ್ನು ನಾವು ಮೆಚ್ಚುತ್ತೇವೆ. ಆದರೆ, ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆಯಾಗಿ ಬಹಳ ಸಮಯವಾಗಿದೆ. ಇನ್ನು ಹೆಚ್ಚು ಹತ್ಯೆಗಳು ಆಗದಂತೆ ತಡೆಯುವುದು ನಿಮ್ಮ ಕರ್ತವ್ಯ ಎಂದು ಅವರು ಹೇಳಿದರು.

ದೇಶದಲ್ಲಿ ಪತ್ರಕರ್ತರು, ವಿಚಾರವಾದಿಗಳಿಗೆ ರಕ್ಷಣೆ ಬೇಕಾಗಿದೆ. ನಮ್ಮ ವಿಚಾರಧಾರೆಯಲ್ಲಿ ಬದ್ಧತೆಯಿದೆ. ಆದರೆ, ನಿಮ್ಮ ವಿಚಾರಧಾರೆಯಲ್ಲಿ ಇಲ್ಲ. ನಮ್ಮ ಅಹಿಂಸೆ ವೌಲ್ಯವು ನಿಜವಾದ ಜೀವನ ದರ್ಶನವಾಗಿದೆ. ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕೇವಲ ಕನ್ನಡಿಗರಿಗೆ ಮಾತ್ರ ತಿಳಿಸಿದರೆ ಸಾಲದು, ಈ ಪತ್ರಿಕೆಯು ಎಲ್ಲ ಭಾಷೆಗಳಲ್ಲಿ ಅನುವಾದವಾಗಬೇಕು ಎಂದು ಅವರು ಹಾರೈಸಿದರು.

ಗೌರಿ ಹಾಕುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸುವುದು ಆಳುವ ವರ್ಗಕ್ಕೆ ದೊಡ್ಡ ಸವಾಲಾಗಿತ್ತು. ದಲಿತರು, ಮಹಿಳೆಯರು, ಆದಿವಾಸಿಗಳು, ಟಿಪ್ಪು ಸುಲ್ತಾನ್ ಜಯಂತಿಯನ್ನು ವಿರೋಧಿಸುವವರ ವಿರುದ್ಧ ಗೌರಿ ಹೋರಾಡಿದ್ದರು ಎಂದು ಮೇಧಾಪಾಟ್ಕರ್ ಹೇಳಿದರು.

ಪ್ರಧಾನಿ ನರೇಂದ್ರಮೋದಿ ಸೆ.17ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸರ್ದಾರ್ ಸರೋವರಕ್ಕೆ ಹೋಗುತ್ತಿದ್ದಾರೆ. ನರ್ಮದಾ ನದಿಯ ದಡದಲ್ಲಿ 40 ಸಾವಿರ ಕುಟುಂಬಗಳನ್ನು ಅನಾಥರನ್ನಾಗಿಸಲಾಗುತ್ತಿದೆ. ಜಾತಿ, ಧರ್ಮದ ಜೊತೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಹತ್ಯೆಯನ್ನು ನಾವು ಖಂಡಿಸಬೇಕು. ಆಗ ಮಾತ್ರ ಇವರ ಸುಳ್ಳು ಪ್ರಚಾರಗಳನ್ನು ತಡೆಯಲು ಸಾಧ್ಯ ಎಂದು ಮೇಧಾ ಪಾಟ್ಕರ್ ತಿಳಿಸಿದರು.

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮಾತನಾಡಿ, ನಾನು ಇಲ್ಲಿ ಪ್ರಜಾಪ್ರಭುತ್ವದ ಸೈನಿಕನಾಗಿ ಬಂದಿದ್ದೇನೆ. ನನ್ನ ದೇಶದ ಬಹುತ್ವ, ನಮಗೆ ಮಾತಾನಾಡಲು, ಚಿಂತಿಸಲು, ಅಭಿವ್ಯಕ್ತಿಪಡಿಸಲು ಅವಕಾಶ ನೀಡಿದೆ. ಬಂದೂಕಿನಿಂದ ಇದನ್ನು ಕೊಲ್ಲಲು ನಾವು ಬಿಡುವುದಿಲ್ಲ ಎಂದರು.

ನನ್ನ ದೇಶವನ್ನ ಹೇಗೆ ರಕ್ಷಿಸಬೇಕು ಅನ್ನೋದರ ಬಗ್ಗೆ ಚರ್ಚಿಸಲು ನಾವು ಇಲ್ಲಿ ಸೇರಿದ್ದೇವೆ. ನಾವು ಇಲ್ಲಿ ನಮ್ಮ ದೇಶದ ಬಹುತ್ವ ಹಾಗೂ ಸಂವಿಧಾನವನ್ನು ರಕ್ಷಿಸಲು ಸೇರಿದ್ದೇವೆ. ಗೋರಕ್ಷಕ ಸಮಿತಿ ದಲಿತರನ್ನ ಕೊಲ್ಲುತ್ತಿದೆ, ಅವರು ನಾವು ಏನನ್ನ ತಿನ್ನಬೇಕು ಅಂತಾ ಹೇಳುತ್ತಿದ್ದಾರೆ. ಅವರು ದೇಶ ವಿರೋಧಿ ಕೆಲಸದಲ್ಲಿ ತೊಡಗಿದ್ದಾರೆ. ಅದರ ವಿರುದ್ಧ ಹೋರಾಡಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಅವರು ಹೇಳಿದರು.

 ಯಾರು ಪ್ರಜಾಪ್ರಭುತ್ವದಲ್ಲಿ ಬಹುತ್ವದ ಸಮೃದ್ಧಿ ಇರುವುದನ್ನ ಸಹಿಸುವುದಿಲ್ಲವೋ ಅವರು ಇದನ್ನ ಹಿಂದುತ್ವ ರಾಷ್ಟ್ರವಾಗಿ ಮಾಡಲು ಹೊರಟಿದ್ದಾರೆ. ಆರೆಸೆಸ್ಸ್ ನೇರವಾಗಿ ಜನರನ್ನ ಕೊಲ್ಲುವುದಿಲ್ಲ. ಸಂಘಪರಿವಾರ ನಿರ್ಮಿಸುತ್ತಿರುವ ಆತಂಕದ ವಾತಾವರಣ ಇಂದು ಅಮಾಯಕರನ್ನು ಕೊಲ್ಲುತ್ತಿದೆ. ನಾವು ಇದರ ವಿರುದ್ಧ ಹೋರಾಡುವ ಯೋಧರು. ಅವರು ಒಳ್ಳೆಯತನದ ಧ್ವನಿಯನ್ನು ಅಡಗಿಸಲು ಹೊರಟಿದ್ದಾರೆ. ಆದರೆ, ಒಳ್ಳೆಯತನ ಎಂದಿಗೂ ಮೌನವಾಗಿರುವುದಿಲ್ಲ ಅನ್ನೋ ಸಂದೇಶ ಸಾರಲು ನಾವು ಇಲ್ಲಿ ಸೇರಿದ್ದೇವೆ ಎಂದು ಸೀತಾರಾಂ ಯೆಚೂರಿ ಹೇಳಿದರು.

ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಮಾತನಾಡಿ, ಸತ್ಯ ಹೇಳುವುದನ್ನ ನಿಮಗೆ ಸಹಿಸಲು ಆಗುವುದಿಲ್ಲ. ನಾವು ಇಂದು ಸಂಕಲ್ಪಮಾಡುತ್ತೇವೆ. ಗೌರಿ ಲಂಕೇಶ್ ಆರಂಭಿಸಿರೊ ಈ ಹೋರಾಟವನ್ನ ಮುಂದಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು.

ಗೌರಿ ಲಂಕೇಶ್ ಹತ್ಯೆಯನ್ನ ಇಡೀ ಜಗತ್ತೆ ಖಂಡಿಸಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಹಾ ಪ್ರಧಾನ ಕಾರ್ಯದರ್ಶಿಯು ಖಂಡಿಸಿದ್ದಾರೆ. ಆದರೆ, ನಮ್ಮ ಪ್ರಧಾನಿ ನರೇಂದ್ರಮೋದಿ ಯಾಕೆ ಮಾತನಾಡುತ್ತಿಲ್ಲ, ಯಾಕೆ ಮೌನಯಾಗಿದ್ದೀರಾ. ನೀವು ಮನ್ ಕಿ ಬಾತ್ ಹೇಳುತ್ತೀರಾ, ಆದರೆ ದೇಶದ ಜನರ ಮನಸ್ಸಿನ ಮಾತನ್ನು ಕೇಳಿ ಎಂದು ಅವರು ಆಗ್ರಹಿಸಿದರು.

 ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ರನ್ನು ಮೌನ ಎಂದು ಕರೆಯುತ್ತಿದ್ದ ನೀವು, ಈಗ ನೀವೆ ಮೌನಯಾಗಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ವಾಮಿ ಅಗ್ನಿವೇಶ್, ಜಾತಿವಾದಿ, ಯಥಾಸ್ಥಿತಿವಾದಿ, ಲಿಂಗ ಸಮಾನತೆ, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರ ಹಕ್ಕುಗಳನ್ನು ವಿರೋಧಿಸುವವರಿಂದಲೆ ಈ ಕೃತ್ಯ ನಡೆದಿದೆ. ರಾತ್ರಿಯ ಕತ್ತಲಲ್ಲಿ ಹೇಡಿಗಳಂತೆ ಬಂದು ಕೊಂದು ಓಡಿಹೋಗಿದ್ದೀರಾ, ಪೊಲೀಸರು ನಿಮ್ಮನ್ನು ಹುಡುಕುತ್ತಿದ್ದಾರೆ ಅನ್ನೋದು ನೆನಪಿರಲಿ ಎಂದರು.

ಗೌರಿ ಲಂಕೇಶ್ ಪ್ರತಿಪಾದಿಸುತ್ತಿದ್ದ ವೈಚಾರಿಕಾ ಕ್ರಾಂತಿಯನ್ನು ನಾವು ಮುಂದುವರೆಸಬೇಕಿದೆ. ಇಂದು ಇಡೀ ಜಗತ್ತಿನಲ್ಲಿ ವೈಚಾರಿಕಾ ಕ್ರಾಂತಿ ಆರಂಭವಾಗಿದೆ. ಸೆ.21ರಂದು ನಡೆಯಲಿರುವ ವಿಶ್ವ ಶಾಂತಿ ದಿನದಂದು ಉತ್ತರಾಖಂಡದ ಹರಿದ್ವಾರದಿಂದ ಅನಾಚಾರ, ವೌಢ್ಯಗಳ ವಿರುದ್ಧ ಜಾಥಾವನ್ನು ಹಮ್ಮಿಕೊಂಡಿರುವುದಾಗಿ ಅವರು ಹೇಳಿದರು.

ಸರಕಾರ-ಜನರ ನಡುವಿನ ಕೊಂಡಿ

ಗೌರಿ ಲಂಕೇಶ್ ಸರಕಾರ ಹಾಗೂ ಜನಸಾಮಾನ್ಯರ ನಡುವಿನ ಕೊಂಡಿಯಾಗಿದ್ದರು. ಈ ಸಮಾವೇಶಕ್ಕೆ ನಾನು ಸಚಿವನಾಗಿ ಬಂದಿಲ್ಲ, ಗೌರಿ ಲಂಕೇಶ್ ಸಹೋದರನಾಗಿ ಬಂದಿದ್ದೇನೆ. ಈವರೆಗೆ ಅವರು ತಮ್ಮ ಸ್ವಂತಕ್ಕಾಗಿ ಏನನ್ನೂ ಕೇಳಿಲ್ಲ, ಯಾವಾಗ ನಮ್ಮನ್ನು ಭೇಟಿಯಾದರೂ ಬಡವರು, ದಲಿತರು, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಿಗಬೇಕಾದ ಸೌಲಭ್ಯಗಳ ಕುರಿತು ಬೇಡಿಕೆಗಳನ್ನು ಇಡುತ್ತಿದ್ದರು. ಗೌರಿ ಲಂಕೇಶ್ ಹತ್ಯೆಗೈದವರನ್ನು ಹಿಡಿದು ಕಾನೂನಿನ ಮೂಲಕ ಸರಕಾರ ಶಿಕ್ಷೆ ಕೊಡುತ್ತದೆ.

-ಯು.ಟಿ.ಖಾದರ್, ಆಹಾರ ಸಚಿವ

 ಗೌರಿ ಲಂಕೇಶ್‌ಗಿದ್ದ ಧೈರ್ಯದಿಂದ ನಾನು ಸ್ಪೂರ್ತಿ ಪಡೆದಿದ್ದೆ. ತಮ್ಮ ಮೌಲ್ಯಗಳಿಗೆ ಅವರು ಬದ್ಧರಾಗಿದ್ದರು. ಸತ್ಯವನ್ನ ವರದಿ ಮಾಡಿದ್ದಕ್ಕೆ ಇಂದು ಪತ್ರಕರ್ತರ ಹತ್ಯೆಗಳು ನಡೆಯುತ್ತಿವೆ. ಸುದ್ದಿ ವಾಹಿನಿಗಳಲ್ಲಿನ ನಿರೂಪಕರು ಮಾಸ್‌ಗನ್‌ಗಳಂತೆ ವರ್ತಿಸುತ್ತಿದ್ದಾರೆ. ಕೇಂದ್ರ ಸರಕಾರ ಪತ್ರಕರ್ತರನ್ನು ವೇಶ್ಯೆಯರಿಗೆ ಹೋಲಿಸುತ್ತದೆ. ನಾನು ಇದನ್ನ ಬಲವಾಗಿ ಖಂಡಿಸುತ್ತೇನೆ. ನೀವು ಸಂವಿಧಾನದ ಮೌಲ್ಯಗಳನ್ನ ಕೊಲ್ಲಲಾರಿರಿ. ನನ್ನನ್ನು ದಮನ ಮಾಡಲು ಯತ್ನಿಸುತ್ತಿರುವವರಿಗೆ ನಾನು ತಲೆ ಬಾಗುವುದಿಲ್ಲ.

‘ಬೇಟಿ ಬಚಾವೋ, ಬೇಟಿ ಪಡಾವೋ’(ಹೆಣ್ಣು ಮಕ್ಕಳನ್ನು ರಕ್ಷಿಸಿ, ಹೆಣ್ಣು ಮಕ್ಕಳನ್ನು ಸುಶಿಕ್ಷಿತರನ್ನಾಗಿಸಿ) ಎಂಬ ಘೋಷಣೆಗಳನ್ನು ಹೇಳುತ್ತಿದ್ದಾರೆ. ಅಗರ್ ಬೇಟಿ ಜ್ಯಾದಾ ಪಡ್‌ಲಿಕ್ಕರ್, ಜ್ಯಾದಾ ಬೋಲಿ ತೋ, ಬೇಟಿ ಕೋ ಗೋಲಿಸೋ ಉಡಾವೋ (ಆದರೆ, ಹೆಣ್ಣು ಮಕ್ಕಳು ಹೆಚ್ಚಿನ ಶಿಕ್ಷಣ ಪಡೆದು, ಹೆಚ್ಚು ಮಾತನಾಡಿದರೆ, ಅವರನ್ನು ಗುಂಡು ಹಾಕಿ ಕೊಲ್ಲಿ) ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

-ಸಾಗರಿಕಾ ಘೋಷ್,

ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಡೆಯುತ್ತಿರುವ ಹೋರಾಟವು, ಸಾಂಸ್ಕೃತಿಕ ಅಸಹಿಷ್ಣುತೆಯ ವಿರುದ್ಧ ನಡೆಯುತ್ತಿರುವ ಹೋರಾಟದ ಮಹತ್ವದ ತಿರುವು. ನಾವು ಇಂದು ದ್ವೇಷ, ಅಸಹಿಷ್ಣುತೆಯನ್ನು ಹರಡುವ ದೊಡ್ಡ ಶಕ್ತಿಯನ್ನು ಎದುರು ಹಾಕಿಕೊಂಡಿದ್ದೇವೆ. ‘ಸಾಹಿತಿಗಳಿಗೆ ಬರವಣಿಗೆ ಕಾರಣಕ್ಕೆ ಭಯವಿದ್ದರೆ, ಅವರು ಬರೆಯುವುದನ್ನೆ ನಿಲ್ಲಿಸಲಿ’ ಎಂದು ಕೇಂದ್ರ ಸಚಿವರೊಬ್ಬರು ಹೇಳುತ್ತಾರೆ. ಇಂತಹ ಕೆಟ್ಟ ಮನಸ್ಥಿತಿಯ ಜನ ರಾಷ್ಟ್ರಮಟ್ಟದ ಅಧಿಕಾರದಲ್ಲಿದ್ದಾರೆ. ಬಿಜೆಪಿ ಸರಕಾರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ದಲಿತರ ಮೇಲೆ ಸಾಮೂಹಿಕ ಹಲ್ಲೆಗಳು, ಕಾಂಗ್ರೆಸ್ ಸರಕಾರಗಳು ಇರುವ ರಾಜ್ಯಗಳಲ್ಲಿ ಧ್ವನಿ ಎತ್ತುವವರ ಧ್ವನಿ ಅಡಗಿಸುವ ತಂತ್ರಗಳನ್ನು ಹೆಣೆಯಲಾಗುತ್ತಿದೆ. ಆ ಕೊಲೆಗಳನ್ನು ಆ ಸರಕಾರಗಳ ಹಣೆಪಟ್ಟಿಗೆ ಕಟ್ಟಲಾಗುತ್ತಿದೆ.

-ಪಿ.ಸಾಯಿನಾಥ್, ಹಿರಿಯ ಪತ್ರಕರ್ತ

ನಾನು ಗೌರಿ ಲಂಕೇಶ್ ಅವರಿಂದ ಸಾಕಷ್ಟು ಕಲಿತ್ತಿದ್ದೇನೆ. ಅವರು ನನಗೆ ತಂದೆ, ಮಗಳು ಎಲ್ಲವೂ ಆಗಿದ್ದರು. ನಾವಿಬ್ಬರು ಸಾಕಷ್ಟು ಬಾರಿ ಜೊತೆಯಾಗಿದ್ದೇವೆ. ಅವರು ಭಾರತೀಯ ಭಾಷೆಯಲ್ಲಿ ಹಲವು ಅದ್ಭುತ ಪುಸ್ತಕಗಳನ್ನ ಪ್ರಕಟಿಸಿದ್ದರು. ವೈಚಾರಿಕತೆ, ಜಾತಿ ವ್ಯವಸ್ಥೆ, ಅನ್ಯಾಯವನ್ನ ಪ್ರಶ್ನಿಸುವ ಗುಣ ಈ ಭೂಮಿಯಲ್ಲೆ ಇದೆ. ಇದು ಬಹುಸಂಸ್ಕೃತಿಗಳ ನಾಡು. ಇದನ್ನ ಯಾವ ಫ್ಯಾಶಿಸ್ಟ್ ಶಕ್ತಿಗಳು, ಕೊಲ್ಲುವ ರಣಹೇಡಿಗಳು ನಾಶಗೊಳಿಸಲು ಸಾಧ್ಯವಿಲ್ಲ. ನಾವು ಗೌರಿ ಲಂಕೇಶ್ ಪ್ರಯತ್ನವನ್ನ ವ್ಯರ್ಥವಾಗಲು ಬಿಡಬಾರದು.

-ತೀಸ್ತಾ ಸೆಟಲ್ವಾಡ್, ಸಾಮಾಜಿಕ ಹೋರಾಟಗಾರ್ತಿ

ಗೌರಿ ಲಂಕೇಶ್‌ಗಾಗಿ ಚಂಪಾ ‘ಪ್ರಶ್ನೋತ್ತರ’ ಕವನ

ಸತ್ತವರು ಎಲ್ಲಿ ಹೋಗುತ್ತಾರೆ?

ಸತ್ತವರು ಎಲ್ಲೂ ಹೋಗುವುದಿಲ್ಲ.

ಇದ್ದವರು ನೆನಪಿನ ಗುದ್ದಲಿಯಾಗುತ್ತಾರೆ.

ಅವರು ಶ್ವಾಸಕೋಶದ ಹಳ್ಳಕೊಳ್ಳಗಳಲ್ಲಿ

ಅವರು ಹುಡಿಯಾಗಿ ಹರಡುತ್ತಾರೆ,

ಹಕ್ಕಿಯಾಗಿ ಹಾರಾಡುತ್ತಾರೆ

ಚುಕ್ಕಿಯಾಗಿ ಚುಮುಕುತ್ತಾರೆ

ಹಾವಾಗಿ ಹರಿದಾಡುತ್ತಾರೆ.

ಸತ್ತವರು ಎಲ್ಲಿ ಹೋಗುತ್ತಾರೆ ಸತ್ತವರು ಎಲ್ಲೂ ಹೋಗುವುದಿಲ್ಲ.

ಎಲ್ಲಿಯತನಕ ಇದ್ದವರು ಸಾಯುವತನಕ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X