ಮಂಜೇಶ್ವರ: ರೈಲಿನಲ್ಲಿ ಸಾಗಿಸುತ್ತಿದ್ದ 14 ಲಕ್ಷ ರೂ. ಮೌಲ್ಯದ ಗಾಂಜಾ ವಶ
ಮಂಜೇಶ್ವರ, ಸೆ. 12: ರೈಲಿನಲ್ಲಿ ಸಾಗಿಸುತ್ತಿದ್ದ 14 ಲಕ್ಷ ರೂ. ಮೌಲ್ಯದ ಗಾಂಜಾವನ್ನು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ತಂಡ ವಶಕ್ಕೆ ತೆಗೆದುಕೊಂಡಿದೆ.
ಸೋಮವಾರ ರಾತ್ರಿ ಚೆನೈಯಿಂದ ಮಂಗಳೂರಿಗೆ ಬರುತ್ತಿದ್ದ ಎಕ್ಸ್‌ಪ್ರೆಸ್ ರೈಲಿನ ಜನರಲ್ ಕಂಪಾರ್ಟ್‌ಮೆಂಟ್ ನಲ್ಲಿ ಪ್ರೊಟೆಕ್ಷನ್ ಫೋರ್ಸ್‌ನ ಎ.ಎಸ್.ಐ ವಿ.ಕೆ ಬಿನೋಯ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬ್ಯಾಗೊಂದರಲ್ಲಿ ಸೂಕ್ಷಿಸಲಾಗಿದ್ದ 13.7 ಕಿಲೋ ಗ್ರಾಂ ಗಾಂಜಾವನ್ನು ಪತ್ತೆ ಹಚ್ಚಲಾಗಿದೆ.
ರೈಲು ಮಂಜೇಶ್ವರ ತಲುಪುವ ವೇಳೆಗೆ ಫೋರ್ಸ್ ಮಿಂಚಿನ ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದೆ. ತಮಿಳುನಾಡಿನಿಂದ ಮಂಗಳೂರಿಗೆ ಸಾಗಿಸಲಾಗುತ್ತಿದ್ದ ಗಾಂಜಾ ಇದೆಂದು ಶಂಕಿಸಲಾಗಿದೆ. ರಾತ್ರಿ ಹೊತ್ತಿನಲ್ಲಿ ಮಂಗಳೂರು ಕಡೆಗೆ ಬರುವ ರೈಲಿನಲ್ಲಿ ಜಿಲ್ಲೆಗೆ ಹಾಗೂ ಮಂಗಳೂರಿಗೆ ವ್ಯಾಪಾಕ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಸಿಕ್ಕಿದ ರಹಸ್ಯ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಪ್ರೊಟೆಕ್ಷನ್ ಫೋರ್ಸ್‌ನ ವಿ.ಟಿ ರಾಜೇಶ್, ಮಧು, ಎಕ್ಸೈಸ್ ಸ್ಟೇಷನ್ ಸ್ಕ್ವಾಡ್ ನ ವಿ.ವಿ ಸಂತೋಷ್ ಕುಮಾರ್, ವಿ. ಸಂತೋಷ್ ಕಾರ್ಯಾಚರಣೆಯಲ್ಲಿದ್ದರು.





