ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಪುರಂದರ ದೇವಾಡಿಗ ನೇಮಕ

ಮೂಡುಬಿದಿರೆ, ಸೆ. 12: ದ.ಕ ಜಿಲ್ಲಾ ಯುವ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿ ನೇಮಕಗೊಂಡ ಪುರಂದರ ದೇವಾಡಿಗ ಅವರಿಗೆ ನೇಮಕ ಆದೇಶ ಪತ್ರ ವಿತರಣಾ ಕಾರ್ಯಕ್ರಮ ಮೂಡುಬಿದಿರೆ ಕಾಂಗ್ರೆಸ್ ಕಛೇರಿಯಲ್ಲಿ ಮಂಗಳವಾರ ನಡೆಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಕೆ. ಅಭಯಚಂದ್ರ ಜೈನ್ ಕಾಂಗ್ರೆಸ್‌ನಲ್ಲಿ ಯುವಕರಿಗೆ ಬೇಡಿಕೆಯಿದೆ. ಯುವಕರಿಗೆ ಅವಕಾಶ ನೀಡಬೇಕೆನ್ನುವುದು ಕಾಂಗ್ರೆಸ್‌ನ ರಾಹುಲ್ ಗಾಂಧಿಯವರ ಉದ್ದೇಶವಾಗಿದೆ. ವಿಧಾನಸಭೆಯಲ್ಲಿ ಯುವ ಕಾಂಗ್ರೆಸ್‌ನ ಧ್ವನಿ ಕೇಳಬೇಕೆಂಬ ಉದ್ದೇಶವನ್ನು ಪಕ್ಷ ಹೊಂದಿದ್ದು ಯುವಕರನ್ನು ಬಲಪಡಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅವಕಾಶವನ್ನು ಯುವಕರಿಗೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ನೇಮಕ ಆದೇಶ ಪತ್ರವನ್ನು ಪುರಂದರ ದೇವಾಡಿಗ ಅವರಿಗೆ ವಿತರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪ್ರಧಾನ ಕಾರ್ಯದರ್ಶಿ ರತ್ನಾಕರ ಮೊಯಿಲಿ,ಕಾಂಗ್ರೆಸ್ ಮುಖಂಡರಾದ ಸಂಜೀವ ಮೊಯಿಲಿ, ಸಂತೋಷ್ ಶೆಟ್ಟಿ, ಜಯ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





