Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಕಲಬುರ್ಗಿ-ಗೌರಿ ಹತ್ಯೆ ಪ್ರಾಯೋಜಕರು...

ಕಲಬುರ್ಗಿ-ಗೌರಿ ಹತ್ಯೆ ಪ್ರಾಯೋಜಕರು ಕರ್ನಾಟದಲ್ಲೆ ಇದ್ದಾರೆ: ನಿಡುಮಾಮಿಡಿ ಶ್ರೀ

ವಾರ್ತಾಭಾರತಿವಾರ್ತಾಭಾರತಿ12 Sept 2017 9:49 PM IST
share
ಕಲಬುರ್ಗಿ-ಗೌರಿ ಹತ್ಯೆ ಪ್ರಾಯೋಜಕರು ಕರ್ನಾಟದಲ್ಲೆ ಇದ್ದಾರೆ: ನಿಡುಮಾಮಿಡಿ ಶ್ರೀ

ಬೆಂಗಳೂರು, ಸೆ.12: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆಕೋರರನ್ನು ಪತ್ತೆ ಹಚ್ಚಿದ್ದರೆ ಗೌರಿ ಲಂಕೇಶ್ ಹತ್ಯೆಯಾಗುತ್ತಿರಲಿಲ್ಲ. ಇವರಿಬ್ಬರ ಹತ್ಯೆಯ ಪ್ರಾಯೋಜಕರು ಕರ್ನಾಟದಲ್ಲೆ ಇದ್ದಾರೆ ಎಂದು ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲಸ್ವಾಮಿ ಹೇಳಿದ್ದಾರೆ.

ಮಂಗಳವಾರ ನಗರದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆಯಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದ ಪ್ರತಿರೋಧ ಸಮಾವೇಶದಲ್ಲಿ ಅವರು ಮಾತನಾಡಿದರು.

ಸರಕಾರದ ಕೆಲಸ ಬಾಡಿಗೆ ಹಂತಕರನ್ನು ಹಿಡಿಯುವುದು ಆಗಬಾರದು. ಹತ್ಯೆ ಮಾಡಿದವರ ಜೊತೆಗೆ ಅದಕ್ಕೆ ಪ್ರಾಯೋಜಕತ್ವ ನೀಡಿದವರನ್ನು ಹಿಡಿದು, ಇವರಿಬ್ಬರ ಸಾವಿಗೆ ನ್ಯಾಯ ಸಲ್ಲಿಸಬೇಕು. ಇನ್ನೆಷ್ಟು ಹತ್ಯೆಗಳಾಗಬೇಕು ಎಂದು ಅವರು ಪ್ರಶ್ನಿಸಿದರು.

 ಕಲಬುರ್ಗಿ ಹತ್ಯೆಯಾದ ಎರಡು ವರ್ಷಗಳಲ್ಲಿ ಮತ್ತೊಂದು ಹತ್ಯೆ ನಡೆದು ಹೋಗಿದೆ. ದೇಶ ಹಿಂಸಾಮಯ, ಪ್ರಕ್ಷುಬ್ಧ ಸ್ಥಿತಿಯತ್ತ ಹೋಗುತ್ತಿದೆ. ಇನ್ನೂ ಎಷ್ಟು ಮಂದಿ ಬಲಿಯಾಗಬೇಕೋ ತಿಳಿಯದು, ಇದೊಂದು ಅಪಾಯಕಾರಿ ಸ್ಥಿತಿಯಾಗಿದೆ ಎಂದು ವೀರಭದ್ರ ಚನ್ನಮಲ್ಲ ಸ್ವಾಮಿ ಹೇಳಿದರು.

ರಾಜಕೀಯ ಮತ್ತು ಧಾರ್ಮಿಕ ಗುಂಪುಗಳು ಹಿಂಸೆಯಿಂದ ಹೊರಗೆ ಬರಬೇಕಿದೆ. ಅಹಿಂಸೆಯಿಂದ ಮಾತ್ರವೇ ಪ್ರಜಾಪ್ರಭುತ್ವದ ಕಡೆ ಸಾಗಬೇಕಿದೆ. ವಿಚಾರವಾದಿಗಳು, ಹೋರಾಟಗಾರರನ್ನು ಕೊಂದರೆ ವಿಚಾರವಾದ, ಹೋರಾಟಗಳು ಸತ್ತು ಹೋಗಿ ಬಿಡುತ್ತವೆಯೇ? ಇಂತಹ ಆಲೋಚನೆಯೆ ಹಿಂಸಾಚಾರ ಮತ್ತು ಪೈಶಾಚಿಕವಾದದ್ದು ಎಂದು ಅವರು ಹೇಳಿದರು.

ಸಾವನ್ನು ಸಂಭ್ರಮಿಸುವವರ ಉದ್ದೇಶ ಏನೆಂದು ಎಲ್ಲರಿಗೂ ಅರ್ಥವಾಗುತ್ತದೆ. ಕಲಬುರ್ಗಿ ಮತ್ತು ಗೌರಿ ಇಬ್ಬರೂ ಹಿಂದುತ್ವದ ಭಯೋತ್ಪಾದಕರಿಗೆ ಬಲಿಯಾಗಿದ್ದಾರೆ. ಕೋಮುವಾದಿಗಳ ಕೈಗೆ ಅಧಿಕಾರ ಕೊಟ್ಟು ಇಂದು ನಾವು ಇಂಥ ಸ್ಥಿತಿ ಎದುರಿಸುತ್ತಿದ್ದೇವೆ. ಶೇ.28ರಷ್ಟು ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿರುವವರು, ಶೇ.72ರಷ್ಟು ಜನರ ಮೇಲೆ ತಮ್ಮ ಆಲೋಚನೆಗಳನ್ನು ಹೇರಿಕೆ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಅವರು ಪ್ರಶ್ನಿಸಿದರು.

ಹಿಂದೂವಾದದ ಮೂಲಕ ಭಾರತದಲ್ಲಿ ಆ ಶಕ್ತಿಗಳು ಕ್ರಿಯಾಶೀಲವಾಗಿವೆ. ಇದಕ್ಕೆ ಅಂತ್ಯ ಹಾಡಬೇಕಿದೆ. ವಿಚಾರಗಳನ್ನು ಒಪ್ಪದ ಕಾರಣಕ್ಕಾಗಿ ಕಲಬುರ್ಗಿಯನ್ನು ಧಾರ್ಮಿಕ ಹತ್ಯೆ ಮಾಡಲಾಗಿದೆ. ಕೋಮುವಾದಿ ಶಕ್ತಿಗಳನ್ನು ಪ್ರಬಲವಾಗಿ ವಿರೋಧ ಮಾಡಿದ್ದರು ಎಂಬ ಕಾರಣಕ್ಕಾಗಿ ಗೌರಿಯನ್ನು ರಾಜಕೀಯ ಹತ್ಯೆ ಮಾಡಲಾಗಿದೆ ಎಂದು ಅವರು ದೂರಿದರು.

ದೇಶ, ಸಂವಿಧಾನ, ಜನರನ್ನು ಹಿಂದುತ್ವವಾದಿಗಳಿಂದ ಕಾಪಾಡಬೇಕಾಗಿದೆ. ಕೋಮುವಾದಿಗಳ ಹಾರಾಟಕ್ಕೆ ವಿರೋಧ ಪಕ್ಷಗಳ ಸೋಲೆ ಕಾರಣ. ಈ ದೇಶದಲ್ಲಿ ಕಾಂಗ್ರೆಸ್ ಕುದಿಯುವ ನೀರಾಗಿದ್ದರೆ, ಪ್ರಾದೇಶಿಕ ಪಕ್ಷಗಳು ನಿಂತ ನೀರಾಗಿವೆ, ಎಡಪಕ್ಷಗಳು ಶುದ್ಧ ನೀರಾದರೂ ಪಾತಾಳ ಗಂಗೆಯಾಗಿದೆ. ಶುದ್ಧ, ಕುದಿಯುವ ಕೊಚ್ಚೆ ನೀರು ಎಲ್ಲ ಸೇರಿ ಬೆಂಕಿಯಾಗಿರುವ ಈ ಬಿಜೆಪಿಯನ್ನು ಆರಿಸಬೇಕಿದೆ ಎಂದು ಅವರು ಕರೆ ನೀಡಿದರು.

ನಮಗೆ ದ್ವೇಷಭಾವನೆ ಮಾಡುವ ರಾಜಕಾರಣ ಬೇಡ. ದ್ವೇಷವನ್ನು ಬೋಧಿಸುವ ಯಾವುದೆ ಧರ್ಮಗಳನ್ನು ನಾವು ಒಪ್ಪುವುದಿಲ್ಲ. ನಾವೆಲ್ಲಾ ಕೂಡಿ ಒಂದು ಹೊಸದೊಂದು ಮನ್ವಂತರವನ್ನು ತರಬೇಕಿದೆ. ಗೌರಿಯ ಆಶಯಗಳನ್ನು ಹೊತ್ತು ಸಾಗಬೇಕಿದೆ. ಸಮಾಜದಲ್ಲಿ ಬಡವ-ಶ್ರೀಮಂತ, ಶೋಷಕ-ಶೋಷಣೆಗಳೆಂಬ ಹಲವು ತಾರತಮ್ಯಗಳಿವೆ. ಈ ಸಮಾಜ ಬದುಕಲು ಯೋಗ್ಯವಲ್ಲದ್ದಾಗಿದೆ. ಅದನ್ನು ನಾವು ಬದಲಾಯಿಸಬೇಕಿದೆ. ಅದಕ್ಕಾಗಿ ಕ್ರಾಂತಿಯನ್ನು ತರಬೇಕಿದೆ. ಕ್ರಾಂತಿಯೆಂದರೆ ರಕ್ತಕ್ರಾಂತಿಯಲ್ಲ. ಜನರ ಮನಸ್ಸಿನಲ್ಲಿ ವಿಚಾರಗಳನ್ನು ಬಿತ್ತುವ ವಿಚಾರಕ್ರಾಂತಿ ಮಾಡಬೇಕಿದೆ. ಇಂತಹ ಕ್ರೌರ್ಯಗಳನ್ನು ಖಂಡಿಸುವಂತಹ ಸಮಾಜವನ್ನು ರೂಪಿಸಬೇಕಿದೆ. ನಾವಿಲ್ಲಿ ಶಾಂತಿಗಾಗಿ ಸಭೆ ಸೇರಿಲ್ಲ ಸಮಾಜವನ್ನು ಕಟ್ಟುವ ಮತ್ತು ಹಂತಕರನ್ನು ಸೆರೆಹಿಡಿದು ಶಿಕ್ಷೆಗೊಳಪಡಿಸುವಂತೆ ಒತ್ತಾಯಿಸುವುದಕ್ಕಾಗಿ ಸಭೆ ಸೇರಿದ್ದೇವೆ. 99 ವರ್ಷದ ವಯಸ್ಸಿನ ನನಗೇ ಇಷ್ಟು ಉತ್ಸಾಹ ಇರಬೇಕಿದ್ದರೆ ಯುವಕರಾದ ನಿಮಗೇಕಿಲ್ಲ. ನೀವೆಲ್ಲಾ ವಿಚಾರಕ್ರಾಂತಿಗೆ ನಾಂದಿ ಹಾಡಬೇಕು.

-ಎಚ್.ಎಸ್.ದೊರೆಸ್ವಾಮಿ,

ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಸಮಾಜ ಯಥಾಸ್ಥಿತಿಯನ್ನೆ ಬಯಸುತ್ತಿತ್ತು. 1947ರಲ್ಲಿ ಸಮಾಜ ಜಡವಾಗಿತ್ತು. ಅಂದಿನ ರಾಜಕೀಯ ಪಕ್ಷಗಳಿಗೆ ಸ್ವಲ್ಪವಾದ್ರೂ ಜಡ ಸಮಾಜವನ್ನ ಪ್ರಗತಿಯತ್ತ ಕೊಂಡೊಯ್ಯುವ ಇಚ್ಛಾಶಕ್ತಿ ಇತ್ತು. ಇಂದಿನ ರಾಜಕಾರಣಿಗಳಿಗೆ ಅದು ಇಲ್ಲ. ಬಂಡವಾಳಶಾಹಿಗಳ ದವಡೆಗೆ ಸರಕಾರಗಳು ಸಿಕ್ಕಿಕೊಂಡಿವೆ. ಬಹುತ್ವಕ್ಕೆ ಧಕ್ಕೆ ಬಂದಿದೆ. ಆದುದರಿಂದಲೆ, ಗೌರಿಯಂತಹವರ ಹತ್ಯೆಯಾಗುತ್ತಿವೆ. ಬಹುತ್ವವೆ ನಮ್ಮ ಧರ್ಮ. ಇದರಲ್ಲಿ ಸಹನೆ ಇದೆ. ಪ್ರೀತಿಯಿದೆ. ಹೀಗಾಗಿ, ನಾವು ಸಮಾನತೆಯಡೆಗೆ ಹೆಜ್ಜೆ ಹಾಕಬಹುದು. ಬಹುತ್ವದ ಧರ್ಮದವರು ಈಗ ಸಮಾಜಕ್ಕೆ ಮುಖಾಮುಖಿಯಾಗಬೇಕಿದೆ, ವಿಶಾಲವಾಗಬೇಕಾಗಿದೆ. ಉದಾರವಾಗಬೇಕಿದೆ. ಬಹುತ್ವದ ಧರ್ಮದವರು ಒಗ್ಗಟ್ಟಾಗಬೇಕಾಗಿದೆ.

-ದೇವನೂರ ಮಹಾದೇವ, ಸಾಹಿತಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X