ಶಿವಪುರ ಆರೋಗ್ಯ ಉಪಕೇಂದ್ರದಲ್ಲಿ ಕಳವು
ಹೆಬ್ರಿ, ಸೆ.12: ಶಿವಪುರ ಗ್ರಾಮದ ‘ಬಿ’ ಆರೋಗ್ಯ ಉಪ ಕೇಂದ್ರಕ್ಕೆ ನುಗ್ಗಿದ ಕಳ್ಳರು ಅಪಾರ ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿ ಯಾಗಿದೆ.
ಉಪಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಅಂಬುಜಾ ಸೆ.7ರಂದು ಸಂಜೆ ಕೆಂದ್ರಕ್ಕೆ ಬೀಗ ಹಾಕಿ ಮನೆಗೆ ಹೋಗಿದ್ದು, ಸೆ.11ರಂದು ಬೆಳಗ್ಗೆ ವಾಪಾಸ್ಸು ಕೆಂದ್ರಕ್ಕೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಕೇಂದ್ರದ ಮುಂದಿನ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಕೇಂದ್ರದಲ್ಲಿದ್ದ ವಾಟರ್ ಫಿಲ್ಟರ್, ಟಾರ್ಚ್, ಏಮೆರ್ಜಿನ್ಸಿ ಲೈಟ್, ಬಲ್ಬ್‌ಗಳು, ಗಡಿಯಾರ, ಲ್ಯಾಂಪ್, ಜಾರ್, ಲಾಕ್‌ಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 4,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





