ಯುವಕ ನಾಪತ್ತೆ
ಕೊಲ್ಲೂರು, ಸೆ.12: ತೀರ್ಥಹಳ್ಳಿಯ ರಾಘವೇಂದ್ರ ಶೆಟ್ಟಿ ಎಂಬವರ ಪುತ್ರ ಪ್ರಜ್ವಲ್ (20) ಎಂಬಾತ ಸೆ.10ರಂದು ಬೆಳಗ್ಗೆ ಚಿತ್ತೂರು ಗ್ರಾಮದ ಹಾರ್ಮನ್ ಎಂಬಲ್ಲಿರುವ ಪತ್ನಿ ಮನೆಯಿಂದ ಕೊಲ್ಲೂರು ದೇವಸ್ಥಾನಕ್ಕೆ ಹೋಗಿ ಬರುವು ದಾಗಿ ಹೇಳಿ ಹೋದವರು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಅವರು ಬುದ್ದಿಮಾಂದ್ಯನಾಗಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





