ಬೇನಾಮಿ ಸಂಸ್ಥೆಗಳ 1 ಲಕ್ಷಕ್ಕೂ ಹೆಚ್ಚು ನಿರ್ದೇಶಕರ ಪಟ್ಟಿ ಸಿದ್ಧ

ಹೊಸದಿಲ್ಲಿ, ಸೆ.12: ಕಂಪೆನಿಗಳ ಕಾಯ್ದೆ 2013ರಡಿ, ಬೇನಾಮಿ ಸಂಸ್ಥೆಗಳ 1.06 ಲಕ್ಷ ನಿರ್ದೇಶಕರನ್ನು ಗುರುತಿಸಲಾಗಿದ್ದು ಇವರನ್ನು ಅನರ್ಹಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಬೇನಾಮಿ ಸಂಸ್ಥೆಗಳ ಜಾಲಬಂಧವನ್ನು ಮುರಿಯಲು ಹಾಗೂ ಕಾಳಧನ, ಹಣ ಚಲುವೆ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೈಗೊಂಡಿರುವ ಕ್ರಮದ ಒಂದು ಭಾಗ ಇದಾಗಿದೆ ಎಂದು ಸಚಿವಾಲಯ ತಿಳಿಸಿದೆ. ಚಾರ್ಟರ್ಡ್ ಅಕೌಂಟೆಂಟ್‌ಗಳು, ಕಂಪೆನಿ ಸೆಕ್ರೆಟರಿಗಳು, ಕಾಸ್ಟ್ ಅಕೌಂಟೆಂಟ್ ಮುಂತಾದ ವೃತ್ತಿಪರರು ಇಂತಹ ಅಕ್ರಮ ಸಂಸ್ಥೆಗಳ ಒಡಗೂಡಿದ್ದಾರೆ. ಇಂತವರ ವಿರುದ್ಧ ಐಸಿಎಐ, ಐಸಿಎಸ್‌ಐ ಮುಂತಾದ ವೃತ್ತಿಸಂಸ್ಥೆಗಳು ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ ಎಂದು ಕಾರ್ಪೊರೇಟ್ ವ್ಯವಹಾರ ಇಲಾಖೆಯ ಸಹಾಯಕ ಸಚಿವ ಪಿ.ಪಿ.ಚೌಧರಿ ತಿಳಿಸಿದ್ದಾರೆ.
Next Story





