Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದೇಯಿ ಬೈದೆತಿ ಪ್ರತಿಮೆ ಶುದ್ದೀಕರಣಕ್ಕೆ...

ದೇಯಿ ಬೈದೆತಿ ಪ್ರತಿಮೆ ಶುದ್ದೀಕರಣಕ್ಕೆ ಅರಣ್ಯ ಇಲಾಖೆ ತಡೆ: ಪ್ರತಿಭಟನೆ

ವಾರ್ತಾಭಾರತಿವಾರ್ತಾಭಾರತಿ12 Sept 2017 10:35 PM IST
share
ದೇಯಿ ಬೈದೆತಿ ಪ್ರತಿಮೆ ಶುದ್ದೀಕರಣಕ್ಕೆ ಅರಣ್ಯ ಇಲಾಖೆ ತಡೆ: ಪ್ರತಿಭಟನೆ

ಪುತ್ತೂರು, ಸೆ. 12: ದೇಯಿ ಬೈದೆತಿ ಪ್ರತಿಮೆಯ ಅವಮಾನ ಮಾಡಿ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ವಿಚಾರಕ್ಕೆ ಸಂಬಂಧಿಸಿ ಪ್ರತಿಮೆಯನ್ನು ಅಪವಿತ್ರಗೊಳಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಮತ್ತು ದುರ್ಗಾವಾಹಿನಿ ಸಂಘಟನೆಯ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಪುತ್ಥಳಿಯ ಶುದ್ಧೀಕರಣ ಕಾರ್ಯಕ್ಕೆ ಮುಂದಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಔಷಧೀಯ ವನದ ಪ್ರವೇಶ ದ್ವಾರದ ಬಾಗಿಲಿಗೆ ಬೀಗ ಜಡಿದು ಶುದ್ದೀಕರಣಕ್ಕೆ ಒಳಹೋಗದಂತೆ ತಡೆದರು. ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ದೇಯಿ ಬೈದೆತಿಯ ಪುತ್ಥಳಿಗೆ ದೇಶೀಯ ಗೋತಳಿಯ ಗೋವಿನ ಹಾಲು, ಸಿಯಾಳಾಭಿಷೇಕ ಮಾಡಿ ಪವಿತ್ರಗೊಳಿಸಲು ವಿಶ್ವಹಿಂದೂ ಪರಿಷತ್ ಮಾತ್ರ ಮಂಡಳಿ ಮತ್ತು ದುರ್ಗಾವಾಹಿನಿ ಸಮಿತಿಯವರು ತೀರ್ಮಾನಿಸಿದ್ದರು. ಅದರಂತೆ ಬೆಳಗ್ಗೆ 10-30ರ ವೇಳೆಗೆ ಮಹಿಳೆಯರೂ ಸೇರಿದಂತೆ ನೂರಾರು ಮಂದಿ ಔಷಧಿಯ ವನದ ಪ್ರವೇಶ ದ್ವಾರದ ಬಳಿ ಜಮಾಯಿಸಿದ್ದರು. ಆದರೆ ಆ ವೇಳೆಗಾಗಲೇ ಪ್ರವೇಶ ದ್ವಾರದ ಗೇಟಿಗೆ ಬೀಗ ಜಡಿಯಲಾಗಿತ್ತು. ಅಲ್ಲಿದ್ದ ಅರಣ್ಯ ಇಲಾಖೆಯ ಅರಣ್ಯ ರಕ್ಷಕರೊಬ್ಬರ ಜೊತೆ ಮಾತುಕತೆ ನಡೆಸಿದರೂ ಅರಣ್ಯ ಇಲಾಖೆಯ ಮೇಲಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಅವರು ಗೇಟಿನ ಜೀಗ ತೆರವುಗೊಳಿಸಲು ನಿರಾಕರಿಸಿರುವುದು ಆಕ್ರೋಶಕ್ಕೆ ಕಾರಣವಾಯಿತು.

ಈ ಸಂದರ್ಭದಲ್ಲಿ ಬಜರಂಗದಳದ ದಕ್ಷಿಣ ಪ್ರಾಂತ ಗೋರಕ್ಷಕ್ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ಅವರು ಇದೊಂದು ಸಾರ್ವಜನಿಕ ಸೊತ್ತಾಗಿದ್ದು, ಅರಣ್ಯ ಇಲಾಖೆ ಮತ್ತು ರಾಜಕೀಯ ಶಕ್ತಿಗಳು ಸೇರಿಕೊಂಡು ಇಲ್ಲಿ ಅಪವಿತ್ರಗೊಂಡಿರುವ ದೇಯಿ ಬೈದೆತಿ ಮೂರ್ತಿ ಶುದ್ದೀಕರಣ ಕಾರ್ಯಕ್ಕೆ ಅಡ್ಡಿ ಪಡಿಸಿವೆ ಎಂದು ಆರೋಪಿಸಿದರು.  ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುವಂತೆ ಹಾಗೂ ಕೋಟಿ ಚೆನ್ನಯರ ಆರಾಧನೆ ನಡೆಯುತ್ತಿರುವ ಪ್ರತೀ ಗರಡಿಗಳ ವ್ಯಾಪ್ತಿಯಲ್ಲಿ ಪ್ರತಿಭಟನೆ ಮಾಡುವಂತೆ ಕರೆ ನೀಡಿದರು. ಅವಕಾಶ ಸಿಗುವ ತನಕ ಹೋರಾಟ ನಡೆಸಲಾಗುವುದು. ಪುತ್ತೂರು ತಾಲ್ಲೂಕು ಬಂದ್‌ಗೆ ಕರೆ ನೀಡಿ, ಪುತ್ತೂರಿ ನಿಂದ ಇಲ್ಲಿಯ ತನಕ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಬಂದು ಅಪವಿತ್ರಗೊಂಡ ಮೂರ್ತಿಯ ಶುದ್ಧೀಕರಣ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.

ದೂರವಾಣಿ ಮಾತುಕತೆಯ ವೇಳೆ ಇವತ್ತು ಬಾಗಿಲು ತೆರೆದು ಅವಕಾಶ ನೀಡಲು ಸಾಧ್ಯವಿಲ್ಲ. ಎರಡು ದಿವಸಗಳ ಬಳಿಕ ನೀವು ಲಿಖಿತವಾಗಿ ಮನವಿ ಸಲ್ಲಿಸಿ, ನಾವು ಮತ್ತೆ ನಿಮಗೆ ಅನುಮತಿ ನೀಡುತ್ತೇವೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿಯವರು ಹೇಳಿರುವ ವಿಚಾರವನ್ನು ಬಜರಂಗದಳದ ದಕ್ಷಿಣ ಪ್ರಾಂತ ಗೋರಕ್ಷಕ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ತಿಳಿಸಿದಾಗ ಜಮಾಯಿಸಿದ ಮಂದಿ ಆಕ್ರೋಶ ವ್ಯಕ್ತಪಡಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ಮೀನಾಕ್ಷಿ ಅವರು ತಾಯಿ ಸ್ವರೂಪಿಯಾದ ದೇಯಿ ಬೈದೆತಿ ಮಹಾಮಾತೆಯ ಪುತ್ಥಳಿಯ ಎದೆಗೆ ಕೈಹಾಕಿ ಪೊಟೋ ತೆಗೆದು ಅದನ್ನು ಸಮಾಜಿಕ ಜಾಲ ತಾಣಗಳ ಮೂಲಕ ಹರಡಿರುವುದು ಇಡೀ ಹಿಂದೂ ಸಮಾಜಕ್ಕೆ ಮಾಡಿರುವ ಅಪಮಾನ. ಕೋಟಿ ದೇವತೆಗಳಿರುವ ನಮಗೆ ಅಲ್ಲಾ, ಏಸು, ಹೆಚ್ಚಾಗುವುದಿಲ್ಲ. ಆದರೆ ನಾವು ಹೇಡಿಗಳಲ್ಲ. ಹಿಂದೂ ದೇಶದಲ್ಲಿ ಹಿಂದೂಗಳು ಎರಡನೇ ಪ್ರಜೆಗಳಾಗಿ ಬದಕಬೇಕೆನ್ನುವುವ ನಿಟ್ಟಿನಲ್ಲಿ ಸವಾರಿ ಮಾಡುವುದನ್ನು ನಾವು ಸಹಿಸುವುದಿಲ್ಲ. ಆಕ್ರಮಣ ,ದುಷ್ಟ ಪ್ರವೃತ್ತಿ ಮುಂದುವರಿದರೆ ನಾವು ರಣಚಂಡಿಗಳಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸ್ಥಳೀಯರಾದ ತಾಲೂಕು ಪಂಚಾಯತ್ ಮಾಜಿ ಸದಸ್ಯೆ ರೇಖಾ ನಾಗರಾಜ್ ಅವರು ಮಾತನಾಡಿ ದೇಯಿ ಬೈದೆತಿ ಹಿಂದೂ ಧರ್ಮಿಯರೆಲ್ಲರ ಪಾಲಿನ ಮಹಾಮಾತೆ. ಆದರೆ ಜೀವವಿಲ್ಲದ ಈ ಮೂರ್ತಿಯ ಎದೆಯ ಭಾಗವನ್ನು ಮುಟ್ಟಿ ಈ ರೀತಿಯ ವಿಕೃತಮನೋಸ್ಥಿತಿ ವ್ಯಕ್ತಪಡಿಸಿದ ಜೀವ ಇರುವ ಮಹಿಳೆಯರಿಗೆ ಏನು ಮಾಡಲಿಕ್ಕಿಲ್ಲ ಎಂದು ಪ್ರಶ್ನಿಸಿದರು. 

ಪುತ್ತೂರಿನ ಗುರುನಾರಾಯಣ ಮಂದಿರದ ಕಾರ್ಯನಿರ್ವಹಣಾಧಿಕಾರಿ ಆರ್.ಸಿ,ನಾರಾಯಣ ಅವರು ಮಾತನಾಡಿ ಕೋಟಿ ಚೆನ್ನಯರ ಹುಟ್ಟೂರಲ್ಲೇ ಈ ಘಟನೆ ನಡೆದಿದ್ದು, ಆರೋಪಿ ಇದೇ ಪರಿಸರದವನಾಗಿರುವುದರಿಂದ ಇದು ದುರುದ್ದೇಶದಿಂದಲೇ ಎಸಗಿದ ಕೃತ್ಯವಾಗಿದೆ. ಅವಿಭಜಿತ ಜಿಲ್ಲೆಯಲ್ಲಿ ಕೋಟಿ ಚೆನ್ನಯರ ತಾಯಿಯಾದ ದೇಯಿ ಬೈದೆತಿಗೆ ವಿಶಿಷ್ಠ ಸ್ಥಾನವಿದ್ದು, ಅಪವಿತ್ರಗೊಳಿಸಿದ ಪುತ್ಥಳಿಯ ಶುದ್ದೀಕರಣಕ್ಕೆ ಅವಕಾಶ ನೀಡದ ಇಲಾಖೆಯ ನೀತಿಯ ಹಿಂದೆಯೂ ಷಡ್ಯಂತ್ರವಿದೆ ಎಂದು ಆರೋಪಿಸಿದರು. ನಮ್ಮ ಹೋರಾಟ ಇಂದು ಅಂತ್ಯವಲ್ಲ, ಆರಂಭ ಎಂದು ಅವರು ತಿಳಿಸಿದರು.

ಬಜರಂಗದಳದ ದಕ್ಷಿಣ ಪ್ರಾಂತ ಗೋರಕ್ಷಕ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ಅವರು ಮಾತನಾಡಿ ಮಾತೆ ದೇಯಿ ಪುತ್ಥಳಿಯ ಅಪವಿತ್ರ ಪ್ರಕರಣದಿಂದ ಹಿಂದೂ ಧರ್ಮದ ನಮ್ಮ ಭಾವನೆಗಳಿಗೆ ಘಾಸಿಯಾಗಿದ್ದು, ಅದನ್ನು ಸರಿಪಡಿಸಿಕೊಳ್ಳುವ ಉದ್ದೇಶದಿಂದ ಶುದ್ದೀಕರಣ ಕಾರ್ಯ ಇಟ್ಟುಕೊಂಡಿದ್ದೆವು. ಆದರೆ ಅವಕಾಶ ನಿರಾಕರಿಸುವ ಮೂಲಕ ಇಲಾಖೆ ಮತ್ತು ಸರ್ಕಾರ ಹಿಂದೂ ಧರ್ಮಿಯರ ಭಾವನೆಗೆ ಮತ್ತೆ ನೋವುಂಟು ಮಾಡಿದೆ. ಮುಂದೆ ಈ ವಿಚಾರದಲ್ಲಿ ಅನಾಹುತಗಳೇನಾದರೂ ಸಂಭವಿಸಿದರೆ ಅದಕ್ಕೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಅವರು ಮಾತನಾಡಿ ಎಲ್ಲಾ ಬಿಲ್ಲವ ಸಂಘಟನೆಗಳು, ಪಡುಮಲೆಯಲ್ಲಿರುವ ಕ್ಷೇತ್ರ ಅಭಿವೃದ್ಧಿ ಪ್ರತಿಷ್ಠಾನಗಳು ಹಾಗೂ ಬಿಲ್ಲವ ಮುಖಂಡರು ದೇಯಿ ಬೈದೆತಿಗಾದ ಅಪಮಾನದ ವಿರುದ್ದ ಸಿಡಿದೇಳಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳು ಔಷಧೀಯ ವನದ ಗೇಟಿನ ಬಾಗಿಲು ತೆರೆಯಲು ಒಪ್ಪದ ಕಾರಣ ಅಸಮಾಧಾನಗೊಂಡ ಸಂಘಟನೆಗಳ ಕಾರ್ಯಕರ್ತರು ಗೇಟಿನ ಪಕ್ಕದಲ್ಲಿಯೇ ನೆಲಕ್ಕೆ ಹಾಲಭಿಷೇಕ ಮತ್ತು ಸಿಯಾಳಭಿಷೇಕ ಮಾಡಿದರು.
 
ಸಂಘಟನೆಗಳ ಪ್ರಮುಖರಾದ ಉಷಾ ಗಣೇಶ್, ವಿಶ್ವಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ಧನ ಬೆಟ್ಟ, ಮಾತೃ ಮಂಡಳಿ ಅಧ್ಯಕ್ಷೆ ಮೋಹಿನಿ ದಿವಾಕರ್, ದುರ್ಗಾವಾಹಿನಿ ಅಧ್ಯಕ್ಷೆ ಅಪರ್ಣ, ಮಾತೃ ಮಂಡಳಿಯ ಜಿಲ್ಲಾ ಪ್ರಮುಖ್ ಪ್ರೇಮಲತಾ ರಾವ್, ಪ್ರಮುಖರಾದ ಗೌರಿ ಬನ್ನೂರು, ಪ್ರಭಾ ಆಚಾರ್ಯ,ಉಷಾ ನಾರಾಯಣ,ಸುಜಾತ ಪರ್ಲಡ್ಕ, ತ್ರಿವೇಣಿ ಕರುಣಾಕರ್, ನೇಹಾ ಕಲ್ಲಾರೆ, ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಬೋರ್ಕರ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಗೌಡ ,ಸವಿತಾ , ಭರತ್ ಈಶ್ವರಮಂಗಲ, ಬಜರಂದದಳದ ಧನ್ಯಕುಮಾರ್, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸುರೇಶ್ ಕಣಿಮರಡ್ಕ ಮತ್ತಿತರರು ಉಪಸ್ಥಿತರಿದ್ದರು. ಡಿವೈಎಸಿ ಶ್ರೀನಿವಾಸ್ ನೇತೃತ್ವದಲ್ಲಿ ಸಂಪ್ಯ ಠಾಣಾ ಪೊಲೀರು ಬಿಗಿ ಬಂದೋಬಸ್ತ್ ನಡೆಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X