ಪ್ರಧಾನಿ ಮೋದಿಯಂತೆ ರಾಹುಲ್ ವಿದೇಶದಲ್ಲಿ ಭಾರತಕ್ಕೆ ಅವಮಾನ ಮಾಡಿಲ್ಲ: ಕಾಂಗ್ರೆಸ್

ಹೊಸದಿಲ್ಲಿ, ಸೆ. 12: ಅಮೆರಿಕದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿರುವುದನ್ನು ಟೀಕಿಸಿರುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಈ ಹಿಂದೆ ಪ್ರಧಾನಿ ಮೋದಿ ಮಾತನಾಡಿ ಭಾರತಕ್ಕೆ ಅವಮಾನ ಮಾಡಿದಂತೆ ರಾಹುಲ್ ಗಾಂಧಿ ಮಾಡಿಲ್ಲ. ಅವರು ಅಮೆರಿಕದಲ್ಲಿ ಭಾರತದ ಗೌರವವನ್ನು ಎತ್ತಿ ಹಿಡಿದಿದ್ದಾರೆ ಎಂದಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬರ್ಕಲಿ ವಿಶ್ವವಿದ್ಯಾನಿಲಯದ ರಾಹುಲ್ ಗಾಂಧಿ ಮಂಗಳವಾರ ಭಾಷಣ ಮಾಡಿದ ಬಳಿಕ ಎರಡೂ ಪಕ್ಷಗಳ ನಾಯಕರ ನಡುವೆ ವಾಗ್ಯುದ್ಧ ಆರಂಭವಾಗಿದೆ.
ದೇಶದಲ್ಲಿರುವ ಅಸಹನೆಯ ವಾತಾವರಣ, ವಿಚಾರವಾದಿ ಪತ್ರಕರ್ತರ ಹತ್ಯೆ, ಗೋಮಾಂಸದ ಹೆಸರಲ್ಲಿ ಮುಸ್ಲಿಮರ ಹತ್ಯೆ ಎಸಗುವ ಅಸಹನೆಯ ವಾತಾವರಣವನ್ನು ಭಾರತ ಸರಕಾರ ಉತ್ತೇಜಿಸುತ್ತಿದೆ ಎಂದು ರಾಹುಲ್ ಗಾಂಧಿ ತನ್ನ ಭಾಷಣದಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸ್ಮೃತಿ ಇರಾನಿ, ವಿಫಲಗೊಂಡ ವಂಶಸ್ಥನೋರ್ವ ತನ್ನ ವಿಫಲಗೊಂಡ ರಾಜಕೀಯ ಪಯಣವನ್ನು ವಿದೇಶದಲ್ಲಿ ಮಾತನಾಡಲು ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.
Next Story





